ಧಾರವಾಡ ಜಿಲ್ಲೆಯು ನೀರು ಪೂರೈಕೆಗಾಗಿ ಅಂತರ್ಜಲ ಮತ್ತು ಮಲಪ್ರಭಾ ಜಲಾಶಯದಂತಹ ಜಲಾಶಯಗಳನ್ನು ಹೆಚ್ಚಾಗಿ ಅವಲಂಬಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯು ನೀರಿನ ಲಭ್ಯತೆಯ ಸವಾಲುಗಳನ್ನು ಎದುರಿಸಿದೆ.
2023 ಹಾಗೂ 24 ರಲ್ಲಿ ದುರ್ಬಲ ಮಾನ್ಸೂನ್ ಕಾರಣದಿಂದಾಗಿ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡಿತ್ತು.
ಒಂದು ವರ್ಷದಲ್ಲಿ ನೀರಿನ ಮಟ್ಟ, 7 ಮೀಟರ್‌ನಿಂದ 11 ಮೀಟರ್‌ಗೆ ಇಳಿದಿತ್ತು. ಇದು ಹಿಂದೆ ಅಂತರ್ಜಲ ಮಟ್ಟಗಳು ಕಡಿಮೆಯಾಗುವ ಪ್ರವೃತ್ತಿಯ ಸೂಚನೆ ನೀಡಿತ್ತು.
2025 ರ ಮಾರ್ಚ್‌ನಿಂದ ಮೇ ತಿಂಗಳ ವರೆಗೆ ಧಾರವಾಡ ಜಿಲ್ಲೆಯ 78 ಹಳ್ಳಿಗಳು ನೀರಿನ ಬಿಕ್ಕಟ್ಟನ್ನು ಎದುರಿಸುವ ಆತಂಕದಲ್ಲಿವೆ.
