ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಕುಸಿತ ಕಂಡಿದೆ.
ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತ ಹೊರಟಿದ್ದ ಹುಬ್ಬಳ್ಳಿ ಧಾರವಾಡಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಯಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ನಿವೃತ್ತರ ಸ್ವರ್ಗ ಎಂದು ಕರೆಯಲ್ಪಡುವ ಧಾರವಾಡದಲ್ಲಿ ಪ್ರತಿ ಚದರ್ ಅಡಿ ಜಮೀನು ಆಯಾ ಪ್ರದೇಶದಲ್ಲಿ ಎರಡು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿತ್ತು.
ಹುಬ್ಬಳ್ಳಿ ಧಾರವಾಡದಲ್ಲಿನ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್‌ಗಳು ಕೋಟಿ ಕೋಟಿ ಹಣ ವ್ಯಯಿಸಿ ಲೇಔಟ್ ಗಳನ್ನು ಮಾಡಿದ್ದು, ಕಡಿಮೆ ದರಕ್ಕೆ ಕೇಳುತ್ತಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ರಸ್ತೆ, ಕೇಶ್ವಾಪುರ, ವಿದ್ಯಾನಗರ, ಲಿಂಗರಾಜ ನಗರ ಈ ಕಡೆಗೆ 30×40 ಅಳತೆಯ ನಿವೇಶನ ಕೊಳ್ಳಲು ಕನಿಷ್ಟ 40 ಲಕ್ಷ ಬೇಕು.
ಧಾರವಾಡದಲ್ಲಿ ಭಾರತಿ ನಗರ, ಸಂಪಗಿ ನಗರ, ವಿದ್ಯಾಗಿರಿ, ಸಾಧನಕೇರಿ ಈ ಭಾಗದಲ್ಲಿ ಸಹ ನಿವೇಶನದ ದರ 40 ಲಕ್ಷ ದಾಟುತ್ತದೆ.
ಹೀಗಾಗಿ ಹುಬ್ಬಳ್ಳಿ ಧಾರವಾಡದ ರಿಯಲ್ ಎಸ್ಟೇಟ್ ವ್ಯವಹಾರ ಕುಸಿತ ಕಂಡಿದೆ. ಮತ್ತೊಂದೆಡೆ ಆಕ್ರಮ ಲೇಔಟ್ ನಿರ್ಮಾಣ ಮಾಡಿ, ತಿಂಗಳ ಕಂತಿನಲ್ಲಿ 20×30 ಅಳತೆಯ ನಿವೇಶನಗಳನ್ನು ಕೊಡಲಾಗುತ್ತಿದೆ.
