ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ರೈತನ ಮಗಳು ದೀಕ್ಷಾ ಜಾಬಿನ್, ವಿಜ್ಞಾನ ವಿಭಾಗದಲ್ಲಿ ಅಮೋಘ ಸಾಧನೆ ಮಾಡಿದ್ದಾಳೆ.
ನವಲಗುಂದ ಶಂಕರ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ದೀಕ್ಷಾ ಜಾಬಿನ್ ಶೇಕಡಾ 92.25 ಅಂಕ ಪಡೆದು, ತಾಲೂಕಿಗೆ ಕೀರ್ತಿ ತಂದಿದ್ದಾಳೆ.
ಪ್ರಗತಿ ಪರ ರೈತ ಆನಂದ ಜಾಬಿನ್ ಇವರ ಮಗಳಾಗಿರುವ ದೀಕ್ಷಾಳನ್ನು ಹುರಕಡ್ಲಿ ಅಜ್ಜನವರ ದೇವಸ್ಥಾನದಲ್ಲಿ, ಊರಿನ ಹಿರಿಯರು ಸೇರಿ ಸತ್ಕರಿಸಿ ಅಭಿನಂದಿಸಿದರು.
