ಬಿಜೆಪಿ ನಾಯಕತ್ವದ ಆಂತರಿಕ ಕದನ ಮುಂದುವರೆದಿದ್ದು, ಯತ್ನಾಳ ಬಣದಲ್ಲಿ ಗುರುತಿಸಿಕೊಂಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರನ್ನು ಮರಳಿ ಕಾಂಗ್ರೇಸ್ಸಿಗೆ ಕರೆತರಲು ಲಾಭಿ ನಡೆದಿದೆ ಎನ್ನಲಾಗಿದೆ.
ಮೊನ್ನೆ ಬೆಳಗಾವಿಯಲ್ಲಿ ಶಾಸಕ ಸೇಠರ ಮಗನ ಮದುವೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಮೇಶ ಜಾರಕಿಹೊಳಿ ಎದುರು ಬದುರಾಗಿದ್ದು, ಕಾಂಗ್ರೇಸ್ಸಿಗೆ ಬರುವಂತೆ ಬೆಳಗಾವಿಯ ಓರ್ವ ಶಾಸಕರು ಸಿ ಎಮ್ ಎದುರೇ ಆಹ್ವಾನ ನೀಡಿದ್ದಾರೆ.
ಯತ್ನಾಳರನ್ನು ಬಿಜೆಪಿ ಉಚ್ಚಾಟನೆ ಮಾಡಿದ್ದು, ಅವರ ಜೊತೆಗಿದ್ದ ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ ತಟಸ್ಥರಾಗಿದ್ದಾರೆ.
ರಮೇಶ ಜಾರಕಿಹೊಳಿ ಬಿಜೆಪಿಯಲ್ಲಿದ್ದರು ಸಹ, ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹಲವು ಸಲ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವರ ಜೊತೆ ಉತ್ತಮ ಬಾಂದವ್ಯ ಹೊಂದಿರುವ ರಮೇಶ ಜಾರಕಿಹೊಳಿ ಮತ್ತೆ ಕಾಂಗ್ರೇಸ್ ಸೇರ್ಪಡೆಯಾಗ್ತಾರೆ ಅನ್ನೋ ಮಾತುಗಳು ಕಾಂಗ್ರೇಸ್ ವಲಯದಲ್ಲಿ ಕೇಳಿ ಬರುತ್ತಿವೆ.
