ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಿಹಾರದ ರಿತೇಶ್ ಕುಮಾರ್‌ನನ್ನು ಎನ್‌ಕೌಂಟರ್ ಮಾಡಿರುವುದಕ್ಕೆ ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ವಕೀಲೆ ಆದಿತ್ಯಾ ಸೋಂದಿ ಪಿಐಎಲ್ ಧಾಖಲು ಮಾಡಿದ್ದಾರೆ.
ಪಿಐಎಲ್ ಅನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ವಕೀಲೆ ಆದಿತ್ಯಾ ಸೋಂದಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾ. ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ, ಸರ್ಕಾರವು ರಿತೇಶ್ ಅವರ ಮೃತದೇಹವನ್ನು ಹೂಳಲಾಗುತ್ತದೆ ಎಂದು ಹೇಳಿರುವದರಿಂದ ಅರ್ಜಿದಾರರ ಮನವಿ ಪರಿಗಣಿಸಬೇಕಿಲ್ಲ.
ರಿತೇಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕು. ಅದರ ವಿಡಿಯೊ ಮಾಡಬೇಕು. ರಿತೇಶ್ ಮೃತದೇಹದ ಮಾದರಿಗಳನ್ನು ಸಂಗ್ರಹಿಸಬೇಕು. ಈ ಸಂಬಂಧ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ.
ಮಾಹಿತಿ – ಬಾರ್ & ಬೆಂಚ್
