ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 19 ವರ್ಷದಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಕಲಘಟಗಿ ಪೊಲೀಸ್ ಠಾಣೆಯ ASI ಅಮ್ಜದ್ ನವಲೂರು ಮತ್ತು ತಂಡ ಮುಂಬೈನಲ್ಲಿ ಬಂಧಿಸಿ ಕರೆತಂದಿದೆ.
ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದ ಆರೋಪಿ ಸಲೀಮ್ ಬೆಟಗೇರಿ, ಅಟ್ರಾಸಿಟಿ ಕೇಸಿನಲ್ಲಿ ಬೇಕಾಗಿದ್ದ.
ಪೊಲೀಸರು ಸಲೀಮನ ಹುಡುಕಾಟದಲ್ಲಿದ್ದರು. ಆರೋಪಿ ಸಲೀಮ್ ಮುಂಬೈನಲ್ಲಿ ಅಡಗಿ ಕುಳಿತಿದ್ದಾನೆ ಅನ್ನೋದನ್ನ ಖಾತ್ರಿ ಪಡಿಸಿಕೊಂಡ ಕಲಘಟಗಿ ASI ಅಮ್ಜದ್ ನವಲೂರು, ಹವಾಲ್ದಾರ ಎಸ್ ಕೆ ಸೋಮನಕಟ್ಟಿ ಹಾಗೂ ಮಲ್ಲಿಕಾರ್ಜುನ ಎನ್ನುವವರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.
ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದು, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಅಮ್ಜದ ನವಲೂರು ತಂಡಕ್ಕೆ ಬಹುಮಾನ ನೀಡಿದ್ದಾರೆ.
