ಐರನ್ ಮ್ಯಾನ್ ಪ್ರಶಸ್ತಿ ವಿಜೇತ, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿ ಪಿ ಐ ಮುರುಗೇಶ ಚನ್ನಣ್ಣವರ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಪೊಲೀಸ ಇನ್ಸಪೆಕ್ಟರ್ ಚನ್ನಣ್ಣವರ, ಶ್ರೀಲಂಕಾದಲ್ಲಿರುವ ರಾಮ ಸೇತು ಮೂಲಕ, ಭಾರತದ ಧನುಷ್ ಕೋಡಿಯವರೆಗೆ 28 ಕಿಲೋಮೀಟರನಷ್ಟು ಈಜುವ ಮೂಲಕ ಸಾಧನೆ ಮಾಡಿದ್ದಾರೆ.
ಚನ್ನಣ್ಣವರ ಇದ್ದ ವಿಶೇಷ ತಂಡದಲ್ಲಿ, ಹುಬ್ಬಳ್ಳಿಯ ಎಮ್ ಬಿ ಬಿ ಎಸ್ ವಿದ್ಯಾರ್ಥಿ ಅಮನ್ ಶಾನಭಾಗ, ಹಾಗೂ ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು IAS ಅಧಿಕಾರಿಗಳು, ಹಾಗೂ ಪಚ್ಚಿಮ ಬಂಗಾಲ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು ಇದ್ದರು.
ಈ ತಂಡ 28 ಕಿಲೋಮೀಟರನ ಕಷ್ಟಕರವಾದ ಈಜನ್ನು ಹಿಂದೂ ಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಮತ್ತು ಅತಿ ಯಾದ ಅಲೆಗಳಲ್ಲಿ ಕೇವಲ 8 ಗಂಟೆ 30 ನಿಮಷದಲ್ಲಿ ಈಜಿ ಬಂದಿದ್ದಾರೆ. ಇದಕ್ಕೆ ಸ್ಫೂರ್ತಿ ತನ್ನ ಧರ್ಮಪತ್ನಿ ಶ್ವೇತಾ ಚನ್ನಣ್ಣವರ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
ಐರನಮ್ಯಾನ ಎಂದೇ ಹೆಸರುವಾಸಿಯಾದ ಮುರುಗೇಶ, ಕಾಶ್ಮೀರ ಟು ಕನ್ಯಾಕುಮಾರಿ ವರೆಗೆ ಸೈಕ್ಲಿಂಗ ಸೇರಿದಂತೆ ಅನೇಕ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.
ಈ ಮೂಲಕ ಕರ್ನಾಟಕ ಪೊಲೀಸ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿದ್ದಾರೆ.
ಇನ್ಸಪೆಕ್ಟರ ಮುರುಗೇಶ ಚನ್ನಣ್ಣವರ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದು, ಅಮನ ಶಾನಬಾಗ ಜೊತೆ ಸೇರಿ ಜೂನ ತಿಂಗಳಲ್ಲಿ ವಿಶ್ವದ ಅತಿ ಕಷ್ಟಕರ ವಾದ ಇಂಗ್ಲಿಷ ಕಾಲುವೆ (ಇಂಗ್ಲೆಂಡ ಮತ್ತು ಫ್ರಾನ್ಸ ಮದ್ಯದ 36 ಕಿಲೋಮೀಟರ ಕಾಲುವೆ) ಯನ್ನು ಈಜಲು ಹೊರಟಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಯ ಹೆಸರನ್ನು ವಿಶ್ವದೆತ್ತರಕ್ಕೆ ಒಯ್ಯುತ್ತಿರುವ ಮುರುಗೇಶ ಚನ್ನಣ್ಣವರ ಸಾಧನೆಗೆ ಒಂದು ಸೆಲ್ಯೂಟ್ ಹೇಳಲೇಬೇಕಾಗಿದೆ.
