ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ.
ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ ರಸ್ತೆಯಲ್ಲಿ ಟಿ ಟಿ ವಾಹನ ಮುಳುಗಿದೆ. ಧಾರವಾಡದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗೆ ನುಗ್ಗಿದ್ದು, ಮನೆಯ ವಸ್ತುಗಳು ನೀರಿನಲ್ಲಿ ತೇಲಿ ಹೋಗಿವೆ.
ಮತ್ತೊಂದೆಡೆ ಹುಬ್ಬಳ್ಳಿಯ ಮಾರುಕಟ್ಟೆ ಪ್ರದೇಶ, ಧಾರವಾಡದ ಟೋಲ್ ನಾಕಾ, ಕೆ ಎಮ್ ಎಫ್, ಎನ್ ಟಿ ಟಿ ಎಫ್ ಕಡೆಗೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
