ಇಂದು ಐ ಪಿ ಎಲ್ ಕ್ರಿಕೇಟ್ ಫೈನಲ್ ಪಂದ್ಯ ನಡೆಯಲಿದ್ದು, ಕರ್ನಾಟಕದ ಆರ್ ಸಿ ಬಿ ತಂಡ ಫೈನಲ್ ಪಂದ್ಯ ಆಡಲಿದೆ.
ಆರ್ ಸಿ ಬಿ ತಂಡ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದಲ್ಲಿ ಧಾರವಾಡದ ಎಗ್ ರೈಸ್ ಅಂಗಡಿ ಮಾಲೀಕರು ಭರ್ಜರಿ ಆಫರ್ ನೀಡಿದ್ದಾರೆ.
ಆರ್ ಸಿ ಬಿ ತಂಡ ಐ ಪಿ ಎಲ್ ಗೆಲ್ಲಲಿ ಎಂದು ಲಕ್ಷಾಂತರ ಜನ ಪ್ರಾರ್ಥನೆ ಮಾಡುತ್ತಿದ್ದರೆ, ಧಾರವಾಡದ ಜೋಡು ಆಂಜನೇಯ ದೇವಸ್ಥಾನದ ಹಿಂದೆ ಇರುವ ಆರ್ ಕೆ 29 ಎಗ್ ರೈಸ್ ಕಾರ್ನರ್ ನವರು ಎಗ್ ರೈಸ್ ಹಾಗೂ ಕಬಾಬನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ.
