ನವಲಗುಂದ ಬಳಿ ಇರುವ ಯಮನೂರಿನಲ್ಲಿ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಣ್ಣೆಹಳ್ಳಕ್ಕೆ ಪ್ರವಾಹ ಬಂದಿದೆ.
ಯಮನೂರು ಗ್ರಾಮ ಸಂಪೂರ್ಣ ನಡುಗಡ್ಡೆಯಂತಾಗಿದೆ. ಚಾಂಗದೇವರ ದರ್ಶನಕ್ಕೆ ಬಂದಿದ್ದ ಕುಟುಂಬ ಗೆಸ್ಟ್ ಹೌಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ನಿನ್ನೆ ರಾತ್ರಿ ಯಮನೂರಿಗೆ ಬಂದಿದ್ದ ಬಸವರಾಜ ಬಂಡಾರಿ, ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಗೆಸ್ಟ್ ಹೌಸ್ ನಡುಗಡ್ಡೆಯಂತಾಗಿದೆ
ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿದೆ. ಗೆಸ್ಟ್ ಹೌಸ್ ನಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಸುರಕ್ಷಿತವಾಗಿ ಕರೆತರಲು ಕಾರ್ಯಾಚರಣೆ ನಡೆದಿದೆ.
