ಬೆಣ್ಣೆಹಳ್ಳ ತುಂಬಿ ಹರಿಯುತ್ತಿದ್ದು, ಆತಂಕ ಸೃಷ್ಟಿಸಿದೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದ್ದು, ಹೊಲವೊಂದರಲ್ಲಿ ಮುನ್ನೂರು ಕುರಿಗಳು ಹಾಗೂ ಮೂವರು ಕುರಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ವಿನೋದ ಅಸೂಟಿ ಟೀಮ್ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ. ಮುನ್ನೂರು ಕುರಿ ಸಮೇತ ಮೂವರು ಕುರಿಗಾರರನ್ನು ಸುರಕ್ಷಿತವಾಗಿ ಕರೆತರಲು ವಿನೋದ ಆಸೂಟಿ ಟೀಮ್ ಮುಂದಾಗಿದೆ.
ನುರಿತ ಈಜುಗಾರರನ್ನು ಹೊಂದಿರುವ ವಿನೋದ ಆಸೂಟಿ ಟೀಮ್, ತಂಡವೊಂದನ್ನು ಮಾಡಿಕೊಂಡಿದ್ದು, ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲಿದೆ.
