ಭಾರತದ ಟೀಮ್ ಪ್ರೈಡ್ ಆಫ್ ಇಂಡಿಯಾ ತಂಡದ 6 ಜನ ಈಜುಗಾರರು ಆಂಗ್ಲರ ನಾಡಿನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ದಿನಾಂಕ 16 ರಂದು ಭಾರತದ ಪ್ರೈಡ್ ಆಫ್ ಇಂಡಿಯಾದ 6 ಜನರನ್ನು ಒಳಗೊಂಡ ತಂಡವು 13 ಘಂಟೆ 37 ನಿಮಿಷಗಳಲ್ಲಿ 48.3 ಕಿಲೋಮಿಟರ ಇಂಗ್ಲಿಷ್ ಚಾನೆಲ್ ಈಜುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡಿನ samthire -hoe ದಡದಿಂದ ಈಜನ್ನು ಆರಂಭಿಸಿ ಪ್ರಾನ್ಸನ wissent ಬೀಚ ವರೆಗೆ 6 ಜನರ ಈ ತಂಡ ಈಜುವ ಮೂಲಕ ಸಾಧನೆ ಮಾಡಿದೆ.
ತಂಡದಲ್ಲಿದ್ದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ, ಪೊಲೀಸ್ ಇನ್ಸ್ಪೆಕ್ಟರ್, ಮುರುಗೇಶ ಚನ್ನಣ್ಣವರ, ಹುಬ್ಬಳ್ಳಿ ಕೆ ಎಮ್ ಸಿ ಯಲ್ಲಿನ ಎಂಬಿಬಿಎಸ್ ವಿದ್ಯಾರ್ಥಿ, ಅಮನ ಶಾನಭಾಗ, ಹರಿಯಾಣದ ಐಎಎಸ್ ಅಧಿಕಾರಿ, ದೀಪಕ್ ಬಾಬುಲಾಲ ಕಾರವಾ, ಆಂಧ್ರ ಪ್ರದೇಶದ ವಿಕಲಾಂಗ ಈಜುಗಾರ, ಗಣೇಶ್ ಬಾಲಾಜ, ಹರಿಯಾಣದ ವಿಕಲಾಂಗ ಈಜುಗಾರ, ರಾಜಬೀರ, ಮಹಾರಾಷ್ಟ್ರದ ಮುಂಬೈನ BBA ವಿದ್ಯಾರ್ಥಿ, ಮಾನವ ಮೊರೆ ಈ ಸಾಧನೆ ಮಾಡಿದ್ದಾರೆ.
ಒಬ್ಬರ ನಂತರ ಒಬ್ಬರಂತೆ ಇಂಗ್ಲಿಷ್ ಚಾನೆಲ್ ಅಸೋಸಿಷನ್ (CSA) ನಿಯಮಗಳಂತೆ ಇವರೆಲ್ಲ ಈಜುವ ಮೂಲಕ ಸಾಧನೆ ಮಾಡಿದ್ದಾರೆ.
ಈ ತಂಡವು 48.3 KM ಈಜನ್ನು 13 ರಿಂದ 16 ಡಿಗ್ರಿ ಸೇಲ್ಸಿಯಸ್ ನಲ್ಲಿ ಈಜಿದ್ದಾರೆ.
ಅತೀಯಾದ ಶೀತ ವಾತಾವರಣದಲ್ಲಿ 13.37 ಘಂಟೆಗಳಲ್ಲಿ ಗುರಿ ತಲುಪಿದ್ದಾರೆ. 16/06/25 ರ ಬೆಳಗಿನ 02-15 ಗಂಟೆಗೆ ಈಜು ಆರಂಭಿಸಿದ ಈ ತಂಡ ಮಧ್ಯಾಹ್ನ 15-52 ಗಂಟೆಗೆ ಗುರಿ ತಲುಪಿ, ಈಜನ್ನು ಮುಕ್ತಾಯಗೊಳಿಸಿದೆ.
ಈಜುವ ಸಂದರ್ಭದಲ್ಲಿ ಕೆಲವು ಜನರಿಗೆ ಅನಾರೋಗ್ಯದಿಂದ ಕಷ್ಟವಾದರು ಗುರಿ ತಲುಪಿದ್ದಾರೆ. ಕೆಲವರಿಗೆ ವಾಂತಿಭೇದಿ, ತಲೆಸುತ್ತುವದು, ಇತರೆ ಸಮಸ್ಯೆಗಳು ಕೂಡಾ ಕಾಡಿದಲ್ಲದೆ, ಈಜುವ ಸಮಸ್ಯೆ ಬಂದರೂ ಸಹ ತಂಡವು ಕೆಚ್ಚೆದೆಯಿಂದ ಈ ಅಭೂತಪೂರ್ವ ಸಾಧನೆ ಮಾಡಿ ಭಾರತದ ತಿರಂಗವನ್ನು ಎತ್ತಿ ಹಿಡಿದಿದೆ.
ಪೊಲೀಸ ಅಧಿಕಾರಿ ಮುರುಗೇಶ್ ಚನ್ನಣ್ಣವರ ಕರ್ನಾಟಕ ಪೊಲೀಸ್ ಧ್ವಜವನ್ನು ಇಂಗ್ಲೆಂಡಿನಲ್ಲಿ ಹಾರಿಸಿ ಇಲಾಖೆಯ ಕೀರ್ತಿಯನ್ನು ವಿದೇಶದಲ್ಲಿ ಹೆಚ್ಚಿಸಿದ್ದಾರೆ.
