ಬೆಂಗಳೂರು ಹೊರತುಪಡಿಸಿದ್ರೆ ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮಹಾನಗರ ಪಾಲಿಕೆ ಸ್ವಚ್ಛತೆ ಕಡೆಗೆ ಗಮನ ಹರಿಸಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಸ ಕಂಡಲ್ಲಿ ಫೋಟೋ ಕಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಒಂದು ವೇಳೆ ಕಸ ಕಂಡಲ್ಲಿ 8277803778 ಈ ನಂಬರಿನ ಮೊಬೈಲ್ ಸಂಖ್ಯೆಗೆ ಕಸದ ಫೋಟೋ ವಾಟ್ಸಪ್ ಮಾಡಿದಲ್ಲಿ 24 ಘಂಟೆಯ ಒಳಗೆ ಕ್ಲೀನ್ ಮಾಡುವದಾಗಿ ಹೇಳಿದೆ.
