ಒಂದು ಕಡೆ ಮುಖ್ಯಮಂತ್ರಿಗಳು ಪ್ರಧಾನಿ ಬಳಿ, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದೆ, ಪರಿಹಾರದ ನೀತಿ ಬದಲಾಯಿಸಿ ಅಂತ್ತಿದ್ದರೆ. ಮತ್ತೊಂದೆಡೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಎಲ್ಲಿಯೂ ಕೃಷಿ ಕುಂಠಿತಗೊಂಡಿಲ್ಲ ಎಂದು ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಕಾರಿನಲ್ಲಿ ಬರುವಾಗ ನಾನು ನೋಡಿದಂಗೆ ಜಮೀನು ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆ. ಮಳೆ ಇಲ್ಲದೆ ಮುಂಗಾರು ಈಗಾಗಲೇ ರೈತನ ಬದುಕನ್ನು ಬೀದಿಗೆ ಚೆಲ್ಲಿದೆ. ಹೀಗಿರುವಾಗ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.
