Download Our App

Follow us

Home » ಮನರಂಜನೆ » ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

 

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು TNIT ಮೀಡಿಯಾ ಅವಾರ್ಡ್ ನೋಡಿ ಆಶ್ಚರ್ಯವಾಯಿತು. ಸಿನಿಮಾ ರಂಗದಲ್ಲಿ ಕಾಣಸಿಗುವ ವೈಭವವನ್ನು ನಾವು ಇಲ್ಲಿ ನೋಡಿದೆವು ಎಂದರು.

ರಘು ಭಟ್ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ, ಮಾಧ್ಯಮದ ಮೇಲಿನ ಈ ಪ್ರೀತಿಗೆ ಶುರುವಾದ ಈ ಕಾರ್ಯಕ್ರಮ ಹೀಗೆ ಇರಲಿ. ನಮ್ಮನ್ನ ಜೂರಿಯಾಗಿ ಕರೆದಿದ್ದಕ್ಕೆ ಧನ್ಯವಾದ ಎಂದರು.

ಈ ಕಾರ್ಯಕ್ರಮದ ಅತಿಥಿಯಾಗಿ ಬಂದಿದ್ದ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಮಾತನಾಡಿ, ಮಾಧ್ಯಮ ನಮ್ಮ ಏಳಿಗೆಗೆ ಸಾಕಷ್ಟು ಸಹಕಾರಿಯಾಗಿದೆ. ಅಲ್ಲಿ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡುವವರು ಇರುತ್ತಾರೆ. ಅಂತವರನ್ನ ಗುರುತಿಸಿ ಸನ್ಮಾನಿಸುವುದು ಒಳ್ಳೆಯ ಸಂಗತಿ. ಮುಂದಿನ ದಿನಗಳಲ್ಲಿ ಪತ್ರಿಕಾರಂಗದಲ್ಲಿ ಇರುವ ಸಾಧಕರಿಗೆ ಪ್ರಶಸ್ತಿ ಕೊಡಿ ಎಂದು ಸಲಹೆ ನೀಡಿದರು.

ತುಪ್ಪದ ಬೆಡಗಿ ರಾಗಿಣಿ ಮಾತನಾಡಿ , ನಾವು ಯಾವುದೋ ಚಿಕ್ಕ ಕೆಲಸ ಮಾಡಿದರು ಅದನ್ನು ಗುರುತಿಸಿ ಬೆನ್ನು ತಟ್ಟುವುದು ಒಳ್ಳೆಯ ವಿಚಾರ. ನಾವು ಅದನ್ನು ತಿಳಿದುಕೊಳ್ಳಬೇಕು. ಆ ನೇಡ್ ಟಿಎನ್‌ಐಟಿ ಮಾಧ್ಯಮ ಮಿತ್ರರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿಯ ವಿಚಾರ ಎಂದರು.  

ಇತರ ಜೂರಿಯಾದ ದೂರದರ್ಶನ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕಿ ನಿರ್ಮಲಾ ಯಲಿಗಾರ ಮಾತನಾಡಿ ಮಾಧ್ಯಮದಲ್ಲಿ ಕೆಲಸ ಮಾಡುವವರನ್ನ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದು ಅಷ್ಟು ಸುಲಭದ ಮಾತಲ್ಲ. ನಾನು ಕೂಡ ಈ ಹಿಂದೆ ಈ ಪ್ರಶಸ್ತಿಗೆ ಭಾಜನಳಾಗಿದ್ದೆ. ಈಗ ಇಲ್ಲಿ ಜೂರಿಯಾಗಿರುವುದು ಖುಷಿಯ ವಿಚಾರ. ನಾವು ಕೂಡ ಮಾಧ್ಯಮದ ಮೇಲೆ ಹುಚ್ಚು ಪ್ರೀತಿ ಹೊಂದಿರುವವರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ TNIT ಸಂಸ್ಥೆಯ ಸಿಇಓ ರಘು ಭಟ್, ಗಣೇಶ್ ಕಾಸರಗೋಡು ಅವರು ನಮ್ಮ ಎಲ್ಲಾ ಕೆಲಸಗಳಿಗೆ ಆಶಿರ್ವಾದ ಮಾಡಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಹಾಗೇ ಪ್ರೇಮ್ ಅವರು ಸಾಕಷ್ಟು ಸಾಥ್ ನೀಡಿದ್ದಾರೆ. ನಮ್ಮ ಕಾರ್ಯಕ್ರಮದ ಪ್ರತಿ ಹಂತದಲ್ಲೂ ಸಹಕರಿಸಿದ್ದಾರೆ ಅವರಿಗೆ ವಿಶೇಷವಾಗಿ ಧನ್ಯವಾದಗಳು

TNIT ಅವಾರ್ಡ್ ಬಗ್ಗೆ ಮಾಹಿತಿ ತಿಳಿಸಿದ ಅವರು ಕಳೆದ ವರ್ಷ ಈ ವರ್ಷವೂ ಸಹ ಕಾರ್ಯಕ್ರಮ ನಡೆಯಲಿದೆ. ಈ ಮಾಧ್ಯವರ ಆಯ್ಕೆಯ ಬಗ್ಗೆ ಕೇಳಿದಾಗ ಉತ್ತರಿಸಿದ ರಘು ಭಟ್ ನಾವು ಅವರು ಎಷ್ಟು ವರ್ಷಗಳಿಂದ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೇವೆ ಹಾಗೂ ಅವರ ಸಾಧನೆಗಳ ಮೇಲೆ ಆಯ್ಕೆ ಮಾಡಲಾಗುತ್ತದೆ.

ಎವಿಆರ್ ಅವರ ಲೀಗಲ್ ಅಡ್ವೈಸರ್ ಶೈಲೇಶ್ ಮಾತನಾಡಿ, ಎವಿಆರ್ ರವರು ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿರುವುದು ಖುಷಿಯ ವಿಚಾರ. ಸಮಾಜದಲ್ಲಿ ಮಾಧ್ಯಮದ ಕೆಲಸ ಶ್ಲಾಘನೀಯ. ಹೀಗಾಗಿ ಅವರನ್ನ ಗುರುತಿಸಿ ಪ್ರಶಸ್ತಿ ನೀಡುವುದು ಉತ್ತಮ ಕೆಲಸ ಎಂದು ಶುಭ ಹಾರೈಸಿದರು.

ಸುದ್ದಿಗೋಷ್ಟಿಯಲ್ಲಿ ಅತಿಥಿಯಾಗಿ ನೆನಪಿರಲಿ ಪ್ರೇಮ್, ತುಪ್ಪದ ಬೆಡಗಿ ರಾಗಿಣಿ, ಜೂರಿಯಾಗಿರುವ ಹಿರಿಯ ಸಿನಿಮಾ ಪತ್ರಕರ್ತ ಗಣೇಶ ಕಾಸರಗೋಡು, ದೂರದರ್ಶನ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕಿ ನಿರ್ಮಲಾ ಯಲಿಗಾರ ಇಬ್ಬರು. 

TNIT ಕಾರ್ಯಕ್ರಮದ ಟೈಟಲ್ ಸ್ಪಾನ್ಸರ್ ಅರವಿಂದ ವೆಂಕಟೇಶ ರೆಡ್ಡಿ ಅವರ ಲೀಗಲ್ ಅಡ್ವೈಸರ್ ಶೈಲೇಶ್, TNIT ಎಂಡಿ ಸುಗುಣ, ಸಿಇಓ ರಘು ಭಟ್, ಸಂಪಾದಕರು ಮೀರಾ, ಮೇಲ್ವಿಚಾರಕಿ ಡಾ.ಮಧುಕಾಂತಿ, ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಹೆಡ್ ಖುಷಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!