ದೇಶದ ಖ್ಯಾತ ಬ್ಯಾಟರಿ ತಯಾರಿಕಾ ಕಂಪನಿ #ಎಕ್ಸೈಡ್ ಎನರ್ಜಿ ಹೊಸ ಘಟಕ ಸ್ಥಾಪಿಸಲು 40 ಎಕರೆ ಭೂಮಿಯನ್ನು ಕೋರಿದೆ. ಪ್ರಸ್ತುತ ದೇವನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ನಿರ್ಮಾಣ ಹಂತದಲ್ಲಿರುವ ಲಿಥಿಯಂ ಬ್ಯಾಟರಿ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಕಂಪನಿಯ ಉದ್ದೇಶವಾಗಿದೆ. ಹೆಚ್ಚುವರಿ ಜಮೀನಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್ ತಿಳಿಸಿದ್ದಾರೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ಡಾ.ಮಂದರ್ ವಿ.ಡಿಯೋ ಅವರ ನೇತೃತ್ವದಲ್ಲಿ, ಕಂಪನಿಯ ಪ್ರತಿನಿಧಿಗಳು ಎಮ್ ಬಿ ಪಾಟೀಲರೊಂದಿಗೆ ಚರ್ಚೆ ನಡೆಸಿದರು. ಮಹತ್ವದ ಬೆಳವಣಿಗೆಯಲ್ಲಿ ಎಕ್ಸೈಡ್ ಎನರ್ಜಿ ಜೊತೆ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ರಾಜ್ಯ, ಲಿಥಿಯಂ ಬ್ಯಾಟರಿ ಉತ್ಪಾದನೆಗೆ ಸಾಕ್ಷಿಯಾಗಲಿದೆ.
