ಒಬ್ಬರನ್ನೊಬ್ಬರ ಮುಖ ನೋಡಲು ಹಿಂದೇಟು ಹಾಕುತ್ತಿದ್ದ ಹುಬ್ಬಳ್ಳಿ ಧಾರವಾಡದ. ಕಾಂಗ್ರೇಸ್ ಸಂಸ್ಥೆ, ಕಾರ್ಯಕರ್ತರು ಜೊತೆ ಇಂದು ಒಟ್ಟಿಗೆ ಹೆಜ್ಜೆ ಹಾಕಿದರು. ಭಾರತ ಜೋಡೋ ಯಾತ್ರೆಗೆ ಒಂದು ವರ್ಷ ಪೂರ್ವ ನಿಮಿತ್ತ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕೂಡಿ ಹೆಜ್ಜೆ ಹಾಕಿದರು. ದ್ವೇಷದ ಪೂರೈಸುವ ಪ್ರೀತಿ ಹಂಚುವ ಉದ್ದೇಶದಿಂದ ಕನ್ಯಾಕುಮಾರಿಯಿಂದ ಹೊರಟ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ 145 ದಿನಗಳನ್ನು ಪೂರೈಸಿ ಕಾಶ್ಮೀರ ತಲುಪಿತ್ತು. 12 ರಾಜ್ಯ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಯ್ದು 4081 ಕಿಲೋಮೀಟರ್ ನಷ್ಟು ನಡೆದು ರಾಹುಲ್ ಧಾಖಲೆ ನಿರ್ಮಿಸಿದ್ದರು.
ಭಾರತ ಜೋಡೋ ಯಾತ್ರೆಯ ವರ್ಷಾಚರಣೆಯಲ್ಲಿ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಜಿಲ್ಲಾಧ್ಯಕ್ಷ ಅನೀಲ್ ಪಾಟೀಲ್, ಸತೀಶ ಮೆಹರವಾಡೆ, ಶಾಕೀರ ಸನದಿ, ಮಾಜಿ ಸಂಸದ ಐಜಿ ಸನದಿ, ವಿನೋದ ಅಸೂಟಿ, ವಿಜಯ ಕುಲಕರ್ಣಿ, ಬಾಬಾಜಾನ ಮುಧೋಳ,ವರ, ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ರಫೀಕ್ ಅಬ್ಬುನವರ ಸೇರಿದಂತೆ ಸಾವಿರಾರು ಜನ ಹೆಜ್ಜೆ ಹಾಕಿದರು.
ಧಾರವಾಡದಲ್ಲಿ ಕಾಂಗ್ರೇಸ್ ಮುಖಂಡ ರಾಬರ್ಟ್ ದದ್ದಾಪೂರಿ, ದಾನಪ್ಪ ಕಬ್ಬೇರ, ಆನಂದ ಜಾಧವ, ವಸಂತ ಅರ್ಕಸಾಲಿ, ಆನಂದ ಅಧೋನಿ, ಆನಂದ ಸಿಂಗನಾಥ ಭಾರತ ಹೆಜ್ಜೆ ಜೋಡೋ ವರ್ಷಾಚರಣೆ ನಿಮಿತ್ತ ಹೆಜ್ಜೆ ಹಾಕಿದರು.