ಅತ್ಯಂತ ವಿಷಕಾರಿ ಬೃಹದಾಕಾರದ ರಸಲ್ ವೈಫರ್ ಹಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ಮನೆಯೊಂದರಲ್ಲಿ ನಡೆದಿದ್ದು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ವಿಡಿಯೋ ಇದೆ ನೋಡಿ
ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದ ಸಂಚಾಲಕರಾದ ಇಸಾಬೆಲ್ಲಾ ಝೆವಿಯರ್ ಮನೆಯಲ್ಲಿ ಏಕಾ ಏಕಿ ಹಾವು ಪ್ರತ್ಯಕ್ಷವಾಗಿ ಮನೆಯ ಸದಸ್ಯರಲ್ಲಿ ಆತಂಕ ಸೃಷ್ಟಿಸಿತ್ತು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಮಾಹಿತಿ ತಿಳಿದ ತಕ್ಷಣಕ್ಕೆ ಸ್ಥಳಕ್ಕೆ ದೌಡಾಯಿಸಿದ ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಅಪಾಯಕಾರಿಯಾದ ರಸಲ್ ವೈಫರ್ ಹಾವು ರಾತ್ರಿಹೊತ್ತು ಸಂಚರಿಸುತ್ತದೆ. ರಸಲ್ ವೈಫರ್ ಹಾವಿನಿಂದ ಜನರು ಸಹ ಎಚ್ಚರದಿಂದ ಇರಬೇಕು ಈ ಹಾವು ಕಚ್ಚಿದರೆ ಗಾಯ ಮಾಯಲು ಒಂದು ವರ್ಷ ಬೇಕಾಗುತ್ತದೆ ಎಂದು ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ತಿಳಿಸಿದರು.