ಡ್ರೋನ್ ಪ್ರತಾಪ ಅಂತಲೇ ಹೆಸರುವಾಸಿಯಾಗಿರುವ ಡ್ರೋನ್ ಪ್ರತಾಪ ಧಾರವಾಡದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಬರಲಿದ್ದಾರೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ ನಡೆಯಲಿದ್ದು, ಹುಬ್ಬಳ್ಳಿಯ ಬಾಹುಬಲಿ ಹೆಲಿ ಸರ್ವಿಸ್ ಸಹಭಾಗಿತ್ವದಲ್ಲಿನ ಮಳಿಗೆಯಲ್ಲಿ ಪ್ರತಾಪರ ಡ್ರೋನ್ ಗಳು ಲಭ್ಯವಿರಲಿವೆ. ರೈತರೊಂದಿಗೆ ಡ್ರೋನ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಿರುವ ಪ್ರತಾಪ್, ಡ್ರೋನ್ ಪ್ರದರ್ಶನಕ್ಕೆ ಇಡಲಿದ್ದಾರೆ. ರಿಯಾಯತಿ ದರದಲ್ಲಿ ಡ್ರೋನ್ ಮಾರಾಟ ಮಾಡಲಾಗುವದೆಂದು ಪ್ರತಾಪ ಕರ್ನಾಟಕ ಫೈಲ್ಸ್ ಗೆ ಮಾಹಿತಿ ನೀಡಿದ್ದಾರೆ.
ಪ್ರತಾಪ ನಾಳೆಯಿಂದ ನಾಲ್ಕು ದಿನಗಳ ಕಾಲ ಧಾರವಾಡದ ಕೃಷಿ ಮೇಳದಲ್ಲಿ ಭಾಗವಹಿಸಲಿದ್ದು, ಆಸಕ್ತರು ಪ್ರತಾಪ ಅವರ ಡ್ರೋನ್ ಮಳಿಗೆಗೆ ಭೇಟಿ ನೀಡಬಹುದಾಗಿದೆ.
