ಹಿಂದಿ ಭಾಷೆಯ ಹೆಸರಾಂತ ಸುದ್ದಿ ವಾಹಿನಿ, ಆಜ್ ತಕ್ ವಾಹಿನಿಯ ಸುದ್ದಿ ನಿರೂಪಕ ಸೇರಿದಂತೆ ಸಂಸ್ಥೆಯ ಮೇಲೆ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ಧಾಖಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿ, ದ್ವೇಷ ಬೆಳೆಸುವಂತಹ ಹಾಗೂ ಕೋಮು ಸಾಮರಸ್ಯ ಕದಡುವ ಆರೋಪದ ಮೇಲೆ ಎಫ್ ಐ ಆರ್ ಧಾಖಲಾಗಿದೆ. 11-09-2023 ರ ರಾತ್ರಿ 09-55 ರ ಸುಮಾರಿಗೆ ಪ್ರಸಾರವಾದ ಕಾರ್ಯಕ್ರಮದಲ್ಲಿ, ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿದೆ. ಇದರಿಂದಾಗಿ ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುದ್ದಿ ಮಾಡಿತ್ತು.
ಹಿಂದೂಗಳಿಗೆ ಮೂರು ಲಕ್ಷ ಸಬ್ಸಿಡಿ ಕೊಡದೆ ಕೇವಲ ಮುಸ್ಲಿಂರಿಗೆ ಕೊಡಲಾಗುತ್ತಿದೆ ಎಂದು ಆರೋಪಿಸಿ ಆಜ್ ತಕ್ ನಿರೂಪಕ ಸುಧೀರ ಚೌದರಿ ಹೇಳಿದ್ದರು.ಆಜ್ ತಕ್ ವಾಹಿನಿ ಈ ರೀತಿ ಸುಳ್ಳು ಸುದ್ದಿ ಹರಡಿ, ಸಮಾಜದ ನೆಮ್ಮದಿ ಕದಡುವದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಸರ್ಕಾರ ದೂರು ಧಾಖಲಿಸಿದೆ. ಕರ್ನಾಟಕ ಅಲ್ಪಸಂಖ್ಯಾತರ ನಿಗಮದ ಶಿವಕುಮಾರ ಎಸ್ ಎಂಬ ಅಧಿಕಾರಿ ಶೇಷಾದ್ರಿಪುರಂ ಠಾಣೆಯಲ್ಲಿ ನಿರೂಪಕ ಸುಧೀರ ಚೌದರಿ ಹಾಗೂ ಸುದ್ದಿ ಸಂಸ್ಥೆ ಮೇಲೆ ದೂರು ಧಾಖಲಿಸಿದ್ದಾರೆ.
ದೂರು ಆಧರಿಸಿ ಶೇಷಾದ್ರಿಪುರಂ ಪೊಲೀಸರು IPC 1860 ಸೆಕ್ಷನ್ 505, 153A ಅಡಿ ಪ್ರಕರಣ ಧಾಖಲಿಸಿಕೊಂಡಿದ್ದಾರೆ. ಸುಧೀರ ಚೌದರಿ A 1 ಆರೋಪಿಯಾಗಿದ್ದು, ಒಟ್ಟು ಮೂವರ ಮೇಲೆ ದೂರು ಧಾಖಲಾಗಿದೆ.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)