ಕಾವೇರಿ ವಿಷಯವಾಗಿ ಧಾರವಾಡದಲ್ಲಿ ನಡೆದ ಪ್ರತಿಭಟನೆ ಗಮನ ಸೆಳೆಯಿತು. ಜ್ಯುಬಿಲಿ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುಧೀರ ಮುಧೋಳ ರಕ್ತದಲ್ಲಿ ಕಾವೇರಿ ನಮ್ಮದು ಎಂದು ಬರೆದು ಆಕ್ರೋಶ ಹೊರಹಾಕಿದರು. ಕರ್ನಾಟಕದ ರೈತರಿಗೆ ನೀರಿಲ್ಲದ ಹೊತ್ತಿನಲ್ಲಿ ಕಾವೇರಿ ನ್ಯಾಯಾಧಿಕರಣದ ಆದೇಶ ಹೇಗೆ ಪಾಲಿಸುವದು ಎಂದು ಪ್ರಶ್ನಿಸಿದ ಮುಧೋಳ, ಜಯ ಕರ್ನಾಟಕ ಸಂಘಟನೆ ಕಾವೇರಿಗಾಗಿ ರಕ್ತ ಕೊಡಲು ಸಿದ್ದ ಎಂದು ಹೇಳಿದರು.
