ಇಲೆಕ್ಟ್ರಿಕ್ ವಾಹನಗಳು ಬಳಕೆಗೆ ಸುರಕ್ಷಿತವೇ ಅನ್ನೋ ಅನುಮಾನ ಇದೀಗ ಆರಂಭವಾಗಿದೆ. ಯಾಕಂದ್ರೆ ಯಾವದೇ ಧಹಿಸುವ ಇಂಧನ ಇಲ್ಲದೆ ಇದ್ದರು ಇಲೆಕ್ಟ್ರಿಕ್ ಕಾರೊಂದು ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜೆ ಪಿ ನಗರದಲ್ಲಿರುವ ದಾಲ್ಮೀಯಾ ಸರ್ಕಲ್ ಬಳಿ ಇಲೆಕ್ಟ್ರಿಕ್ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿಯುತ್ತಿದ್ದಂತೆ ಕಾರಿನಲ್ಲಿದ್ದವರು ಹೊರಗೆ ಬಂದಿದ್ದಾರೆ. ಅಲ್ಲಿದ್ದವರು ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಘಟನೆಗಳು ಸಂಭವಿಸುವ ಸಂದರ್ಭದಲ್ಲಿ ಸ್ವಯಂ ಸಂವೇದನೆ ಕೊಡುವ ಅತ್ಯಾಧುನಿಕ ತಾಂತ್ರಿಕತೆ ಇದ್ದರು ಸಹ ಈ ಘಟನೆ ನಡೆದಿದೆ.
