ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನ ಭಗವಾನ ಬಾಹುಬಲಿಯ, ಮಹಾ ಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಮಹಾಭಿಷೇಕ ನಡೆಯುತ್ತದೆ. ಫೆಬ್ರವರಿ 22 ರಿಂದ ಮಾರ್ಚ 1 ರ ವರೆಗೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮಹಾಮಸ್ತಕಾಭಿಷೇಕಕ್ಕೆ ಎಲ್ಲ ತರದ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವ ದಿನೇಶ ಗುಂಡೂರಾವ ತಿಳಿಸಿದ್ದಾರೆ. ದಿನೇಶ ಗುಂಡೂರಾವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸರ್ಕಾರ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಿದೆ ಎಂದು ತಿಳಿಸಿದರು.
ವೇಣೂರು, ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಫಲ್ಗುಣಿ ನದಿಯ ದಡದಲ್ಲಿರುವ ಒಂದು ಸಣ್ಣ ಗ್ರಾಮವಾಗಿದ್ದು, ಒಂದು ಕಾಲದಲ್ಲಿ ಜೈನ ಧರ್ಮದ ಸ್ಥಾನವಾಗಿತ್ತು ಮತ್ತು ಅಜಿಲ ರಾಜವಂಶದ ರಾಜಧಾನಿಯಾಗಿತ್ತು . ಇಲ್ಲಿ ಏಕಶಿಲೆಯಲ್ಲಿರುವ ಬಾಹುಬಲಿ ಮೂರ್ತಿ ಇದ್ದು, 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.