ಗದಗ ಜಿಲ್ಲೆಯ ನರೇಗಲ್ ಬಳಿ ವಾಯುವ್ಯ ಸಾರಿಗೆ ಬಸ್ ಮತ್ತು ಟಾಟಾ ಸುಮೋ ನಡುವೆ ಸಂಭವಿಸಿದ ದುರಂತದಲ್ಲಿ ಸಾವಿನ ಸಂಖ್ಯೆ 7 ಕ್ಕೆ ಏರಿದೆ. ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ಇಬ್ಬರು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ ಐದು ವರ್ಷದ ದಿಂಗಾಲೇಶ ಎಂಬ ಬಾಲಕಿದ್ದಾನೆ. ಇವರೆಲ್ಲ ಇಂದು ಬೆಳಿಗ್ಗೆ ಕಲಬುರ್ಗಿಯಿಂದ ಶಿರಹಟ್ಟಿಯ ಫಕಿರೇಶ್ವರ ಮಠಕ್ಕೆ ಟಾಟಾ ಸುಮೋ ವಾಹನದಲ್ಲಿ ಹೋಗುತ್ತಿದ್ದರು. ನರೇಗಲ್ ಬಳಿ ಬರುತ್ತಿದ್ದಂತೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ. ಗದಗ ಜಿಲ್ಲಾಸ್ಪತ್ರೆಯಲ್ಲಿ ಧಾಖಲಾದ ಗಾಯಾಳುಗಳನ್ನು ದಿಂಗಾಲೇಶ್ವರ ಶ್ರೀಗಳು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
