ಶೈಕ್ಷಣಿಕ ಕಾಶಿ ಧಾರವಾಡದಲ್ಲಿ ಟೆನಿಸ್ ಲೋಕ ಅನಾವರಣಗೊಂಡಿದೆ. ಪೇಡಾ ನಗರಿಯಲ್ಲಿ ಮೊದಲ ಬಾರಿಗೆ ಪುರುಷರ ಟೆನಿಸ್ ಸ್ಪರ್ಧೆ ಅಚ್ಚುಕಟ್ಟಾಗಿ ನಡೆದಿದೆ. 12 ದೇಶಗಳ ಟೆನಿಸ್ ಪಟುಗಳು ಧಾರವಾಡದಲ್ಲಿ ನಡೆದಿರುವ ಅಂತರರಾಷ್ಟ್ರೀಯ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಧಾರವಾಡದಲ್ಲಿ ನಡೆದಿರುವ ಅಂತರರಾಷ್ಟ್ರೀಯ ಟೆನಿಸ್ ಸ್ಪರ್ಧೆ ಉದ್ಘಾಟನೆ ಮಾಡಲು ಬಂದಿದ್ದ ಭಾರತ ಕ್ರಿಕೇಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದಿನ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ರಾಜಕೀಯ ಬದಿಗಿಟ್ಟು ಕೆಲಕಾಲ ಟೆನಿಸ್ ಆಡಿ ಗಮನ ಸೆಳೆದರು. ಸಂತೋಷ ಲಾಡ್ ಉತ್ತಮ ಕ್ರೀಡಾಪಟುವಾಗಿದ್ದು, ಮೊಹಮ್ಮದ ಅಜರುದ್ದಿನ ಸಹ ಕ್ರೀಡಾಪಟು ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇಬ್ಬರು ಒಂದೇ ಪಕ್ಷದಲ್ಲಿದ್ದು, ಸಂತೋಷ ಲಾಡ್ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದರೆ, ಅಜರುದ್ದಿನ ತೆಲಂಗಾಣ ರಾಜ್ಯ ಕಾಂಗ್ರೇಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದಾರೆ.