ಹಳ್ಳಿಕಾರ ತಳಿ ಜಾನುವಾರು ಸಾಕಾಣಿಕೆ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ, ಬಿಗ್ ಬಾಸ್ ಸೀಸನ್ 10 ರ ಪ್ರತಿಸ್ಪರ್ಧಿ ವರ್ತೂರು ಸಂತೋಷನನ್ನು ಬಂಧಿಸಲಾಗಿದೆ. ಕೊರಳಲ್ಲಿ ಹುಲಿ ಉಗುರಿನ ಲಾಕೆಟ್ ಧರಿಸಿದ ಹಿನ್ನೆಲೆಯಲ್ಲಿ ಸಂತೋಷ ಮೇಲೆ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಬಿಗ್ ಬಾಸ್ ಮನೆಯಲ್ಲಿಯೆ ಬಂಧಿಸಲಾಗಿದೆ. ರಾಮೋಹಳ್ಳಿ ಅರಣ್ಯ ಅಧಿಕಾರಿಗಳು ಸಂತೋಷನನ್ನು ಬಂಧಿಸಿ, ಕಗ್ಗಲಿಪುರ ಅರಣ್ಯ ಕಚೇರಿಯಲ್ಲಿ. ವಿಚಾರಣೆ ನಡೆಸಿದ್ದಾರೆ.
ಯಾರು ಈ ಸಂತೋಷ ಅಂತ ನೋಡೋದಾದ್ರೆ
ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆ ಮೂಲಕ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್ ಹಳ್ಳಿಕಾರ್ ಕ್ಯಾಟಲ್ ಬ್ರೀಡ್ ಅಥವಾ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಹಳ್ಳಿಕಾರ್ ಒಡೆಯ ಎಂದೇ ಪ್ರಸಿದ್ದಿ ಪಡೆದಿದ್ದರು.