ವಿರೋಧ ಪಕ್ಷದ ನಾಯಕನನ್ನು (ಎಲ್‌ಒಪಿ) ಪಕ್ಷವು ನೇಮಿಸದಿದ್ದರೆ ಮುಂಬರುವ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದು ಕರ್ನಾಟಕ ಬಿಜೆಪಿ ಶಾಸಕರು ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಸರ್ಕಾರ ರಚನೆಯಾಗಿ 6 ತಿಂಗಳು ಗತಿಸಿವೆ. ಒಂದು ಅಧಿವೇಶನ ವಿರೋದ ಪಕ್ಷದ ನಾಯಕನಿಲ್ಲದೆ ಮುಗಿದು ಹೋಗಿದೆ. ಕಾಂಗ್ರೇಸ್ ಸರ್ಕಾರದ ಆಡಳಿತದ ವಿರುದ್ಧ ಹೊರಗೆ ಹೋರಾಟ ನಡೆಸುತ್ತಿರುವ ಬಿಜೆಪಿ ಶಾಸಕರು ಹಾಗೂ ಮುಖಂಡರು, ಅಧಿವೇಶನದ ಒಳಗೆ ವಿರೋದ ಪಕ್ಷದ ನಾಯಕನ ನೇಮಕ ಮಾಡದೆ ಇರೋದರಿಂದ ಗೊಂದಲಕ್ಕಿಡಾಗಿದ್ದಾರೆ. ಹಾಗಾಗಿ ಅಧಿವೇಶನದಿಂದ ದೂರ ಉಳಿಯುವ ಎಚ್ಚರಿಕೆಯನ್ನು ಹೈಕಮಾಂಡಗೆ ರವಾನಿಸಿದ್ದಾರೆ ಎನ್ನಲಾಗಿದೆ.