ಉರ್ಫಿ ಜಾವೇದ್, ಇಂಡಿಯನ್ ಹಿಂದಿ ಸೀರಿಯಲ್ ನಲ್ಲಿ ಅತೀ ಹೆಚ್ಚು ಚರ್ಚೆಯಾಗುವ ಹೆಸರು. ಈಕೆ ತುಂಡು ಬಟ್ಟೆಯ ಉಡುಗೆಯಿಂದಲೇ ಪ್ರಸಿದ್ದಿ ಪಡೆದಿದ್ದಾಳೆ. ಇಂದು ಮುಂಬೈನ ರಸ್ತೆಯಲ್ಲಿ ತುಂಡು ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ಉರ್ಫಿ ಜಾವೇದ ಎಂಬಾಕೆಯನ್ನು ಮುಂಬೈನ ಮಹಿಳಾ ಪೊಲೀಸರು ಬಂಧಿಸಿದ್ದಾರೆ. 2016 ರಲ್ಲಿ ಸೋನಿ ಟಿವಿಯಲ್ಲಿ ಪ್ರಸಾರವಾದ ” ಭೈಯ್ಯಾ ಕಿ ದುಲ್ಹನಿಯಾ” ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಳು.
ಅದಾದ ಬಳಿಕ ಫ್ಯಾಷನ್ ಜಗತ್ತಿಗೆ ಕಾಲಿಟ್ಟಿದ್ದಳು. ಮನಸೋ ಇಚ್ಛೆ ಬಟ್ಟೆ ಧರಿಸುತ್ತಿದ್ದ ಈಕೆ, ಮೈ ಮಾಟ ಪ್ರದರ್ಶನ ಮಾಡುತ್ತಲೇ ಬಂದಿದ್ದಾಳೆ. ಇಂದು ಮುಂಬೈನ ರಸ್ತೆಯಲ್ಲಿ ಅಸಭ್ಯ ಉಡುಗೆ ತೊಟ್ಟು ಬಂದಿದ್ದರ ಪರಿಣಾಮ ಆಕೆಯನ್ನು ಬಂಧಿಸಲಾಗಿದೆ.