ಮಹತ್ವದ ಬೆಳವಣಿಗೆಯೊಂದರಲ್ಲಿ ಕುಂದಗೋಳದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇಂದ ಟಿಕೇಟ್ ವಂಚಿತರಾಗಿದ್ದ ಚಿಕ್ಕನಗೌಡ್ರ, ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಟಿಕೇಟ್ ತಪ್ಪಲು ಕೇಂದ್ರ ಸಚಿವ ಜೋಶಿ ಕಾರಣ ಎಂದು ಬಹಿರಂಗವಾಗಿಯೇ ಹೇಳಿದ್ದ ಚಿಕ್ಕನಗೌಡ್ರ, ಜೋಶಿಯವರ ವಿರುದ್ಧ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಅವರ ಜೊತೆ ಕಾಣಿಸಿಕೊಂಡಿದ್ದ ಎಸ್ ಐ ಚಿಕ್ಕನಗೌಡ್ರ, ಶೀಘ್ರದಲ್ಲಿ ಕಾಂಗ್ರೇಸ್ ಸೇರಲಿದ್ದಾರೆ. ಕಾಂಗ್ರೇಸ್ ಸೇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ, ಕಾಂಗ್ರೇಸ್ ನಾಯಕ ಶಿವಾನಂದ ಬೆಂತೂರ ಜೊತೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಹೊತ್ತಿನಲ್ಲಿ ನಡೆದ ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ಚಿಕ್ಕನಗೌಡ್ರರನ್ನು ಕಾಂಗ್ರೇಸ್ ಗೆ ಕರೆತರುವಲ್ಲಿ ಜಗದೀಶ್ ಶೆಟ್ಟರ ಹಾಗೂ ಶಿವಾನಂದ ಬೆಂತೂರ ಪ್ರಮುಖ ಪಾತ್ರ ವಹಿಸಿದ್ದಾರೆ.