ತೆಲಂಗಾಣದಲ್ಲಿ ನಿರಂತರವಾಗಿ ರಾಜಕೀಯ ಸಭೆ, ಸಮಾವೇಶ ನಡೆಸಿದ್ದ ರಾಹುಲ್ ಗಾಂಧಿ ಇಂದು ಪ್ರಸಿದ್ಧ ಕೇದಾರನಾಥ ಯಾತ್ರೆ ಕೈಗೊಂಡರು. ಕೊರಳಲ್ಲಿ ರುದ್ರಾಕ್ಷಿ ಧರಿಸಿದ ರಾಹುಲ್ ಕೇದಾರನಾಥನ ದರ್ಶನ ಪಡೆದರು. ಕೇದಾರನಾಥ ದರ್ಶನಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿತು. ದೇವಸ್ಥಾನದಲ್ಲಿ ಕೆಲಹೊತ್ತು ಕಾಲ ಕಳೆದ ರಾಹುಲ್, ಪ್ರಾರ್ಥನೆ ಸಲ್ಲಿಸಿದರು.