ಹಿರಿಯ ಐ ಎ ಎಸ್ ಅಧಿಕಾರಿಯಾದ ಮೇಜರ್, ಮಣಿವಣ್ಣನ ಅವರು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಆ ಇಲಾಖೆಯ ಚಿತ್ರಣವೇ ಬದಲಾಗಿದೆ. ಆಯಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆಗೆ ಹೋದಂತ ಸಂದರ್ಭದಲ್ಲಿ ಮೇಜರ್ ಮಣಿವಣ್ಣನ ಅವರು ಐಷಾರಾಮಿ ಕೊಠಡಿಯ ಬದಲು ಹಾಸ್ಟೇಲ್ ನಲ್ಲಿ ವಾಸ್ತವ್ಯ ಮಾಡುತ್ತಾರೆ. ನಿನ್ನೇ ಹುಬ್ಬಳ್ಳಿಗೆ ಬಂದಿದ್ದ ಮೇಜರ್ ಮಣಿವಣ್ಣನ ಅವರು ಹುಬ್ಬಳ್ಳಿಯ ಎರಡು ಹಾಸ್ಟೇಲ್ ಗೆ ಹೋಗಿ ವಿಧ್ಯಾರ್ಥಿಗಳ ಕುಂದುಕೊರತೆ ಆಲಿಸಿದ್ದಾರೆ. ಅಲ್ಲಿಂದ ನೇರವಾಗಿ ನಿನ್ನೇ ಹೆಬ್ಬಳ್ಳಿಯ ವಸತಿ ನಿಲಯಕ್ಕೆ ಬಂದ ಮಣಿವಣ್ಣನ ಹಾಸ್ಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮುಂಜಾನೆ ಮಕ್ಕಳೊಂದಿಗೆ ಉಪಹಾರ ಸೇವನ ಮಾಡಿದರು. ಇದಕ್ಕೂ ಮುನ್ನ ಮಣಿವಣ್ಣನ ಅವರು ಸ್ನಾನಕ್ಕೆ ತೆರಳಿದಾಗ ಬಿಸಿ ನೀರು ಇರಲಿಲ್ಲ. ಕಡೆಗೆ ತಣ್ಣೀರು ಸ್ನಾನ ಮಾಡಿದ ಮಣಿವಣ್ಣನ ಧಾರವಾಡದ ಜಿಲ್ಲಾಧಿಕಾರಿಯತ್ತ ಹೊರಟರು.
ಹೋಗುವಾಗ ಹಾಸ್ಟೇಲ್ ವಿಧ್ಯಾರ್ಥಿಗಳನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ನಾಲ್ಕು ಸುತ್ತು ಹಾಕಿ, ಚೆನ್ನಾಗಿ ಓದಿ ಉತ್ತಮ ನಾಗರಿಕರಾಗುವಂತೆ ಹೇಳಿದರು.
