ಬಿಜೆಪಿ ಫೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳರ ಕನಸು ಭಗ್ನಗೊಂಡಿದೆ. ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳರು ಕೊತ ಕೊತ ಕುದಿಯುತ್ತಿದ್ದಾರೆ. ಒಂದೆಡೆ ಅಧ್ಯಕ್ಷ ಸ್ಥಾನ, ಮತ್ತೊಂದೆಡೆ ವಿಪಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ನವೆಂಬರ್ 10 ರ ನಂತರ ಟ್ವಿಟ್ ನಲ್ಲಿ ಸದ್ದು ಮಾಡಿದ್ದಾರೆ.
# ನ ದೈನ್ಯಂ ನ ಪಲಾಯನಂ #
ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಅಸಮಾಧಾನಗೊಂಡು ಪಕ್ಷದ ಎಲ್ಲಿಯೂ ಕಾಣಿಸಿಕೊಳ್ಳದ ಪ್ರಖರ ಹಿಂದುತ್ವವಾದಿ ಯತ್ನಾಳ, ಇಂದು ನಡೆದ ರಾಜಕೀಯ ಬೆಳವಣಿಗೆ ಹಿನ್ನೇಲೆಯಲ್ಲಿ ” ನ ದೈನ್ಯಂ ನ ಪಲಾಯನಂ” ಎಂಬ ಮಾತನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಇದರ ಅರ್ಥ,
ಒಬ್ಬ ಯೋಧ ಯಾವುದಕ್ಕೂ ಜಗ್ಗೋ ಮಾತಿಲ್ಲ. ಅಥವಾ ವಿಷಾದಿಸಲು ಸಾಧ್ಯವಿಲ್ಲ. ಅವನ ಜೀವನ, ಅಂತ್ಯವಿಲ್ಲದ ಸವಾಲು, ಮತ್ತು ಸವಾಲುಗಳು ಬಹುಶಃ ಒಳ್ಳೆಯದು ಅಥವಾ ಕೆಟ್ಟದ್ದಲ್ಲ. ಸವಾಲುಗಳು ಕೇವಲ ಸವಾಲುಗಳಾಗಿವೆ ಎಂದು ಟ್ವಿಟ್ ಮಾಡಿದ್ದಾರೆ.