ಆಜಾನ್ ವಿಷಯಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಮಸೀದಿಗಳಲ್ಲಿ ದಿನಕ್ಕೆ 5 ಹೊತ್ತು ಆಜಾನ್ ದ್ವನಿವರ್ಧಕ ಬಳಸುವದರಿಂದ ಶಬ್ದ ಮಾಲಿನ್ಯ ಉಂಟಾಗೋದಿಲ್ಲ ಎಂದು ಗುಜರಾತ್ ಹೈಕೋರ್ಟ ತೀರ್ಪು ನೀಡಿದೆ. ದ್ವನಿವರ್ಧಕಗಳಲ್ಲಿ ಆಜಾನ್ ಕೂಗುವದನ್ನು ನಿಷೇಧಿಸಬೇಕೆಂದು, ಧರ್ಮೇಂದ್ರ ಪ್ರಜಾಪತಿ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರವಾಲ್ ಮತ್ತು ಅನಿರುದ್ದ ಮಯೀ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಬಹಳ ವರ್ಷಗಳಿಂದ ಅಜಾನ್ ಹೇಳುತ್ತಾ ಬರಲಾಗುತ್ತಿದೆ ಅದು ಆ ಧರ್ಮದ ನಂಬಿಕೆ ಎಂದ ವಿಭಾಗೀಯ ಪೀಠ, ಅದು ದಿನದಲ್ಲಿ ಕೇವಲ 10 ನಿಮಿಷಗಳಲ್ಲಿ ಮುಗಿದು ಹೋಗುವ ಪ್ರಕ್ರಿಯೆ ಎಂದು ಹೇಳಿತು.
ಇದು ಸಂಪೂರ್ಣ ತಪ್ಪು ಕಲ್ಪನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದ್ದು, ಆಜಾನ್ ಸಮಯದಲ್ಲಿ ಶಬ್ದ ಡೆಸಿಬಲ್‌ಗಳನ್ನು ಅಳೆಯಲು ವೈಜ್ಞಾನಿಕ ವಿಧಾನದ ಆಧಾರದ ಮೇಲೆ ಯಾವುದೇ ಅಡಿಪಾಯವನ್ನು ರಚಿಸಲು ಅರ್ಜಿಯು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿತು.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)