ವಿಶ್ವ ವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಕ್ಕೆ ವೆಚ್ಚ ಮಾಡಲಾದ ಹಣದ ಬಗ್ಗೆ ಮೈಸೂರು ಜಿಲ್ಲಾಡಳಿತ ಲೆಕ್ಕ ಕೊಟ್ಟಿದೆ.
ಈ ಬಾರಿಯ ದಸರಾ ಕಾರ್ಯಕ್ರಮಕ್ಕೆ ಒಟ್ಟು 27 ಕೋಟಿ ವೆಚ್ಚ ಮಾಡಲಾಗಿದೆ. ಕಳೆದ ಬಾರಿ ದಸರಾಗಿಂತ ಈ ಬಾರಿಯ ದಸರಾಗೆ ಒಂದು ಕೋಟಿ ಹೆಚ್ಚು ಖರ್ಚು ಮಾಡಲಾಗಿದೆ. ಕಳೆದ ಬಾರಿಯ ದಸರಾ ಕಾರ್ಯಕ್ರಮಕ್ಕೆ 26 ಕೋಟಿ ವೆಚ್ಚ ಮಾಡಲಾಗಿತ್ತು. ಈ ಬಾರಿ ಅದು 27 ಕೋಟಿಗೆ ಹೋಗಿದೆ. ಸರ್ಕಾರ ಹಾಗೂ ಪ್ರಾಯೋಜಕತ್ವದಿಂದ ಒಟ್ಟು 29 ಕೋಟಿ ಹಣ ಬಂದಿದ್ದು, 27 ಕೋಟಿ ಸರ್ಕಾರ ಕೊಟ್ಟರೆ, ಎರಡು ಕೋಟಿ ಪ್ರಾಯೋಜಕತ್ವದಿಂದ ಬಂದಿದೆ.
ಅಲ್ಲದೆ ಈ ಸಲ ಗೋಲ್ಡನ್ ಟಿಕೇಟ್ ಮಾರಾಟದಿಂದ ಒಂದು ಕೋಟಿ ರೂಪಾಯಿ ಬಂದಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಎಮ್ ರಾಜೇಂದ್ರ ದಸರಾ ವೆಚ್ಚ ಬಿಡುಗಡೆ ಮಾಡಿ ಲೆಕ್ಕ ಕೊಟ್ಟಿದ್ದಾರೆ. ಯಾವ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಗಿದೆ ಅನ್ನೋದರ ಮಾಹಿತಿ ಈ ಕೆಳಗೆ ಇದೆ ನೋಡಿ.