ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಸಿದ್ದರಾಮಯ್ಯನವರ ಗ್ಯಾರಂಟಿ ಭಾಗ್ಯಗಳನ್ನು ನಂಬಿದವರಿಗೆ ಮೂರು ನಾಮ ಹಾಕಿದ್ದು ಬಿಟ್ಟರೆ ಯಾವ ಗ್ಯಾರಂಟಿಯನ್ನೂ ಸಂಪೂರ್ಣವಾಗಿ ಜಾರಿಗೊಳಿಸಿಲ್ಲ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರು ಮಾತನಾಡಿದ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಅದರಲ್ಲಿ ಸಿದ್ದರಾಮಯ್ಯ, ಚುನಾವಣೆ ಬಂದಾಗ ಏನೋ ಹೇಳಿರತಿವಿ, ಹೇಳಿದಂತೆ ನಡಕೊಳ್ಳೋಕೆ ಆಗತ್ತಾ, ದುಡ್ಡು ಎಲ್ಲಿಂದ ತರಲಿ ಎಂದು ಹೇಳಿದ ವಿಡಿಯೋ ಹರಿದಾಡುತ್ತಿದೆ. ಇದನ್ನೇ ಉಲ್ಲೇಖ ಮಾಡಿರುವ ಬಸನಗೌಡ ಪಾಟೀಲ ಯತ್ನಾಳ, ಈ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದೆ.
ಎಲ್ಲರಿಗೂ ಟೋಪಿ ಹಾಕಿ ಚುನಾವಣೆ ಗೆದ್ದು ಪ್ರಶ್ನೆ ಮಾಡಿದವರಿಗೆ ಈಗ ಕಾರಣಗಳ ಸರಮಾಲೆಯನ್ನು ಮುಖ್ಯಮಂತ್ರಿ ನೀಡುತ್ತಿದ್ದಾರೆ ಎಂದು ಯತ್ನಾಳ ಆರೋಪಿಸಿದ್ದಾರೆ.
ಮಹದೇವಪ್ಪನಿಗೂ ಇಲ್ಲ,
ಕಾಕಪಾಟಿಲನಿಗೂ ಇಲ್ಲ!
ಅನ್ನೋ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಎಡಿಟ್ ಮಾಡಿದ್ದಾರೆ ಎನ್ನಲಾಗಿದೆ.