ವಿಶ್ವವನ್ನೇ ನಡುಗಿಸಿದ್ದ ಕೊರೋನಾ ಮತ್ತೆ ರಾಜ್ಯಕ್ಕೆ ಕಾಲಿಟ್ಟಿದೆ. ಕೊರೋನಾ ತನ್ನ ಆರ್ಭಟ ಆರಂಭಿಸುವ ಮುನ್ನವೇ ಅದನ್ನು ಕಟ್ಟಿ ಹಾಕಲು ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ರಾಜ್ಯದಲ್ಲಿ ಕೊರೋನಾದ ಹೊಸ ರೂಪಾಂತರ ತಳಿ ಹಬ್ಬದಂತೆ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಇಂದಿನಿಂದ 60 ವರ್ಷ ವಯಸ್ಸು ದಾಟಿದವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕೆಂದು ವಿನಂತಿಸಿದೆ. ಜನಸಂದನಿ ಇರುವ ಕಡೆಗೆ ಕೆಮ್ಮು ಇರುವವರು ಓಡಾಡದಂತೆ ಸಹ ಮನವಿ ಮಾಡಿದೆ. ಕೊರೋನಾ ಸೋಂಕು ಕಂಡು ಬಂದೊಡನೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆಸ್ಪತ್ರೆಗಳು ಸಂಪೂರ್ಣ ಸಿದ್ಧತೆಯಲ್ಲಿವೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ತಿಳಿಸಿದ್ದಾರೆ.
ಸಧ್ಯ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದಿರುವ ಸಚಿವರು, ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.