ಧಾರವಾಡದಲ್ಲಿ ಕರಳು ಕಿತ್ತು ಬರುವ ಘಟನೆ ನಡೆದಿದೆ. ಧಾರವಾಡದ ರಾಜ ನಗರದ ಮನೆಯೊಂದರಲ್ಲಿ ಬಡತನದ ಕಾರಣಕ್ಕೆ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಸುಂದರವ್ವ ಗಂಭೆರ ಎಂಬಾಕೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರ್ಥಿಕ ಸಂಕಷ್ಟದಲ್ಲಿ ಎದುರಿಸುತ್ತಿದ್ದ ಸುಂದರವ್ವ, ಸ್ವಸಹಾಯ ಸಂಘದಲ್ಲಿ ಸಾಲ ಮಾಡಿಕೊಂಡಿದ್ದಳಂತೆ. ಸಾಲ ತೀರಿಸಲಾಗದೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟನಲ್ಲಿ ಬರೆದುಕೊಂಡಿದ್ದಾಳೆ. ತನ್ನಿಂದ ಹಣ ಪಡೆದವರು ವಾಪಸ ಹಣ ಕೊಡದೆ ಇರೋ ಕಾರಣಕ್ಕೆ ನೊಂದ ಜೀವವೊಂದು ಬಲಿಯಾಗಿದೆ.
ತನ್ನ ನಿಧನದ ನಂತರ ಅಂತ್ಯ ಸಂಸ್ಕಾರಕ್ಕೂ ಹಣ ಇಲ್ಲ. ಹಾಗಾಗಿ ನನ್ನ ಮೃತದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಎಂದು ಡೆತ್ ನೋಟಿನಲ್ಲಿ ಬರೆದಿದ್ದಾಳೆ. ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.