ಯಾವಾಗ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯನವರನ್ನು ” ಮಗನೇ ” ಎಂದು ಕರೆದರೋ, ಆ ಹೇಳಿಕೆ ಅಹಿಂದ ವರ್ಗದಲ್ಲಿ ಕಿಚ್ಚು ಹೊತ್ತಿಸಿದೆ. ರಾಜ್ಯದಾಧ್ಯಂತ ಅನಂತಕುಮಾರ ಹೆಗಡೆ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಮತ್ತೊಂದೆಡೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿದ್ದರಾಮಯ್ಯನವರು ಅಹಿಂದ ಸಮುದಾಯದ ” ದೇವರ ಮಗ ” ಎಂದು ಕರೆದಿದ್ದಾರೆ. ಸನಾತನಿಗಳು ಸಿದ್ದರಾಮಯ್ಯನವರನ್ನು ” ಮಗನೇ ” ಎಂದು ಭೋಧಿಸಿರಬಹುದು ಆದರೆ ಅಹಿಂದ ಸಮುದಾಯಕ್ಕೆ ಸಿದ್ದರಾಮಯ್ಯ ದೇವರ ಮಗ ಎಂದು ಭಾವಿಸುತ್ತೇವೆ ಎಂದು ಸುದರ್ಶನ್ ಜಯರಾಮ ಎಂಬುವವರು ಬರೆದುಕೊಂಡಿದ್ದಾರೆ.
ಮೇಲ್ವರ್ಗದ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರು ಸಹ ಸಿದ್ದರಾಮಯ್ಯ ಹಿಂದುಳಿದವರ ದ್ವನಿ ಎಂದು ಬರೆದುಕೊಂಡಿದ್ದಾರೆ.