ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಮಸೀದಿ ನಿರ್ಮಾಣಕ್ಕೆ ಕೊಟ್ಟಿರುವ ಜಾಗದಲ್ಲಿ ಮಸೀದಿಯ ಅಗತ್ಯವಿಲ್ಲ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ
ಬಾಬರಿ ಮಸೀದಿ ಮುಖ್ಯ ಅರ್ಜಿದಾರರಾಗಿದ್ದ ಇಕ್ಬಾಲ್ ಅನ್ಸಾರಿ, ಅಯೋಧ್ಯೆಯಲ್ಲಿ ಮಸೀದಿಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲಿ ಬೇಸಾಯ ಮಾಡಬೇಕು ಮತ್ತು ಯಾವುದೇ ಉತ್ಪನ್ನ ಬಂದರೂ ಅದನ್ನು ಹಿಂದೂ ಮತ್ತು ಮುಸ್ಲಿಮರಿಗೆ ಹಂಚಲಿ ಎಂದಿದ್ದಾರೆ.
ಅವರು ರಾಮಮಂದಿರದ ಪ್ರತಿಕೃತಿಯನ್ನು ಸಹ ಖರೀದಿಸಿದ್ದಾರೆ ಮತ್ತು ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ರಾಮ ಮಂದಿರ ನಿರ್ಮಾಣದಿಂದ ಸಾಕಷ್ಟು ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.