ನಾಳೆ ದಿನಾಂಕ 08 ರಂದು ಸಂಜೆ 5 ಘಂಟೆಗೆ ಧಾರವಾಡದ ಕೆ ಸಿ ಡಿ ಕಾಲೇಜಿನ ಹಿಂದೆ ಇರುವ ಸೃಜನಾ ರಂಗ ಮಂದಿರದಲ್ಲಿ ಸೂತಪುತ್ರನೋ.. ಸೂರ್ಯಪುತ್ರನೋ…. ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.
ಬಸವರಾಜ ದೊಡಮನಿ ನಿರ್ದೇಶನ ಮಾಡಿರುವ, ಕುರುಬಗಟ್ಟಿಯ ರುದ್ರಪ್ಪ ಅರಿವಾಳ ರಚಿಸಿರುವ ಸೂತಪುತ್ರನೋ… ಸೂರ್ಯಪುತ್ರನೋ ಅರ್ಥಾತ್ ಕುಂತಿಪುತ್ರ ಕರ್ಣ ಎಂಬ ನಾಟಕ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಜನಸಾಗರ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಈ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಪ್ರವೇಶ ಉಚಿತವಿದೆ ಎಂದು ಸಂಘಟಕರು ತಿಳಿಸಿದ್ದಾರೆ.