Download Our App

Follow us

Home » ಭಾರತ » CAA. ಪೌರತ್ವ ತಿದ್ದುಪಡಿ ಕಾಯ್ದೆಗೆ ಅಧಿಸೂಚನೆ. ಮುಸ್ಲಿಮಯೇತರರಿಗೆ ಪೌರತ್ವ.

CAA. ಪೌರತ್ವ ತಿದ್ದುಪಡಿ ಕಾಯ್ದೆಗೆ ಅಧಿಸೂಚನೆ. ಮುಸ್ಲಿಮಯೇತರರಿಗೆ ಪೌರತ್ವ.

ಕಡೆಗೂ ನರೇಂದ್ರ ಮೋದಿ ಸರ್ಕಾರ ಬಹುಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆಗೆ ಅಧಿಸೂಚನೆ ಹೊರಡಿಸಿದೆ. 2014 ರ ಡಿಸೆಂಬರ 31 ರ ವರೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ಥಾನ ದೇಶದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮಯೇತರರಿಗೆ ಪೌರತ್ವ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಮೂರು ದೇಶದಿಂದ ಭಾರತಕ್ಕೆ ಬಂದು 6 ವರ್ಷ ಗತಿಸಿದ ಮುಸ್ಲಿಮಯೇತರರಿಗೆ ಪೌರತ್ವ ನೀಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ ಈ ಮೂರು ದೇಶವನ್ನು ಹೊರತು ಪಡಿಸಿ ಬೇರೆ ದೇಶಗಳಿಂದ ಭಾರತಕ್ಕೆ ಬಂದು 11 ವರ್ಷ ನೆಲೆಸಿದ ಮುಸ್ಲಿಮಯೇತರರಿಗೆ ಪೌರತ್ವ ನೀಡಲಿದೆ.

ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, 30 ಸಾವಿರಕ್ಕೂ ಹೆಚ್ಚು ಜನ ಪೌರತ್ವ ಪಡೆಯಲು ಅರ್ಹರಾಗಿದ್ದಾರೆಂದು ಗೃಹ ಸಚಿವಾಲಯ ಹೇಳಿದೆ. ಈ ಕಾಯ್ದೆಯಿಂದ ಭಾರತದಲ್ಲಿರುವ ಮುಸ್ಲಿಮರಿಗೆ ಯಾವದೇ ರೀತಿಯಲ್ಲಿ ಪೌರತ್ವಕ್ಕೆ ಧಕ್ಕೆಯಾಗೋದಿಲ್ಲ ಎಂದು ಹೇಳಲಾಗಿದೆ. 2019 ಡಿಸೆಂಬರ್ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಂಗೀಕಾರಗೊಂಡಿದೆ. ಇದೀಗ ನಿಯಮವಾಗಿ ಜಾರಿಗೆ ಬರುತ್ತಿದೆ.

ನರೇಂದ್ರ ಮೋದಿ ಸರ್ಕಾರ ತಾನು ಭರವಸೆಕೊಟ್ಟಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಕಡೆಗೂ ಹೊರಡಿಸಿದೆ. ದೇಶಾದ್ಯಂತ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ನಿಯಮಗಳು ಅನ್ವಯವಾಗಲಿದೆ. ಪೌರತ್ವಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಹಾಕುವಂತೆ ಹೇಳಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!