ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ, ಬ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ, ದಿಟ್ಟ IAS ಅಧಿಕಾರಿ ಕೆ ಎಸ್ ಲತಾಕುಮಾರಿಗೆ ಸರ್ಕಾರ ಬೇರೆ ಹುದ್ದೆ ನೀಡಿ ವರ್ಗಾಯಿಸಿದೆ.
ಕೆ ಎಸ್ ಲತಾಕುಮಾರಿ ಇದೀಗ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ CEO ಆಗಿ ನೇಮಕಗೊಂಡ ಲತಾಕುಮಾರಿ ಇಂದು ಅಧಿಕಾರ ವಹಿಸಿಕೊಂಡರು. ಕ್ರೈಸ್ ಅಡಿಯಲ್ಲಿ 2 ಲಕ್ಷ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಕ್ರೈಸ್ ಸೊಸೈಟಿ 833 ವಸತಿ ಶಾಲೆಗಳನ್ನು ನಡೆಸುತ್ತಿದೆ.
ರಾಷ್ಟ್ರ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವಹಿಸುವ ಜವಾಬ್ದಾರಿ ವಹಿಸಿಕೊಂಡ ಲತಾಕುಮಾರಿಯವರಿಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ ಭಾರತ ಸಂವಿಧಾನ ಪುಸ್ತಕ ನೀಡಿ ಅಭಿನಂದಿಸಿದರು.