ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಟಿಕೇಟ ತಪ್ಪುವ ಭೀತಿಯಲ್ಲಿದ್ದಾರೆ. ಎರಡು ಸಲ ಸಂಸದರಾಗಿದ್ದ ಪ್ರತಾಪ, ಕೆಲವು ವಿವಾದಾತ್ಮಕ ಹೇಳಿಕೆಗಳಿಂದ ರಾಜ್ಯದ ಗಮನ ಸೆಳೆದಿದ್ದರು.
ಮೂರನೇ ಸಲವು ಸಂಸದರಾಗಬೇಕು ಎನ್ನುವಷ್ಟರಲ್ಲಿ ಮೈಸೂರು ಕ್ಷೇತ್ರಕ್ಕೆ ಹೊಸ ಮುಖಕ್ಕೆ ಮಣೆ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಷಯ ಖುದ್ದು ಪ್ರತಾಪಸಿಂಹಗೂ ಮನವರಿಕೆಯಾಗಿದೆ ಎನ್ನಲಾಗಿದೆ. ಪ್ರತಾಪಸಿಂಹ ಬದಲಿಗೆ ಮೈಸೂರು ಮಹಾರಾಜ ಯದುವೀರಗೆ ಟಿಕೇಟ ಎನ್ನಲಾಗುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ಪ್ರತಾಪ, ಯಾತಕ್ಕೆ ಟಿಕೇಟ್ ನಿರಾಕರಣೆ ಮಾಡಲಾಗುತ್ತಿದೆ ಗೊತ್ತಾಗುತ್ತಿಲ್ಲಾ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಪ್ರತಾಪ ಬೆಂಬಲಿಗರು, ಟಿಕೇಟ್ ತಪ್ಪಿಸಲು ಬಿ ಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಹುನ್ನಾರ ನಡೆಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಪ್ರತಾಪಸಿಂಹ, ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ನಲ್ಲಿ ಶೀರ್ಷಿಕೆಯಲ್ಲಿಯೇ ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ ಎಂದು ಮಾತನಾಡಿಕೊಳ್ಳಲಾಗುತ್ತಿದ್ದು “ಯಡಿಯೂರಪ್ಪ ಸಾಹೇಬ್ರ ಬಗ್ಗೆ ಸುಮ್ನೆ ಹಂಗೆಲ್ಲ ಹೇಳಬೇಡಿ ” ಎಂದು ಹೇಳಿದ್ದಾರೆ.