ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ, ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ನವಲಗುಂದದ ಪ್ರಸಿದ್ದ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.
ಪ್ರವಾಸದ ಮಧ್ಯೆ ನವಲಗುಂದಕ್ಕೆ ಆಗಮಿಸಿದ್ದ ಜೋಶಿಯವರಿಗೆ ಟ್ರಸ್ಟ ವತಿಯಿಂದ ಸನ್ಮಾನಿಸಲಾಯಿತು. ಲಕ್ಷಾಂತರ ಭಕ್ತರು ಈ ರಾಮಲಿಂಗ ಕಾಮಣ್ಣನಿಗೆ ಹರಕೆ ಹೊರುತ್ತಾರೆ. ಒಂದು ವರ್ಷದ ಒಳಗೆ ಹರಕೆ ಈಡೇರುತ್ತವೆ ಅನ್ನೋ ನಂಬಿಕೆ ಇದ್ದು, ಪ್ರತಿ ವರ್ಷ ನಾಲ್ಕು ದಿನಗಳ ಕಾಲಾವಧಿಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ರಾಮಲಿಂಗ ಕಾಮಣ್ಣನ ದರ್ಶನ ಪಡೆಯುತ್ತಾರೆ.