Download Our App

Follow us

Home » ಅಪರಾಧ » ನೇಹಾ ಹಿರೇಮಠ ಕಗ್ಗೊಲೆಗೆ ವೀರಶೈವ ಲಿಂಗಾಯತ ಸಮುದಾಯ ಖಂಡನೆ. ನೇಹಾ ಸಾವಿನ ಮೇಲೆ ಯಾವದೇ ರಾಜಕೀಯ ಪಕ್ಷ, ರಾಜಕಾರಣ ಮಾಡದಂತೆ ಬಂಗಾರೇಶ ಎಚ್ಚರಿಕೆ

ನೇಹಾ ಹಿರೇಮಠ ಕಗ್ಗೊಲೆಗೆ ವೀರಶೈವ ಲಿಂಗಾಯತ ಸಮುದಾಯ ಖಂಡನೆ. ನೇಹಾ ಸಾವಿನ ಮೇಲೆ ಯಾವದೇ ರಾಜಕೀಯ ಪಕ್ಷ, ರಾಜಕಾರಣ ಮಾಡದಂತೆ ಬಂಗಾರೇಶ ಎಚ್ಚರಿಕೆ

ಗುರುವಾರದಂದು ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜ್ ವಿಧ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಇವಳನ್ನು ಅಮಾನುಷವಾಗಿ ಕೊಲೆಗೈದ ರಕ್ಕಸ, ಫಯಾಜ್ ಎಂಬಾತನಿಗೆ ಉಗ್ರ ಶಿಕ್ಷೆ ನೀಡುವಂತೆ ವೀರಶೈವ ಲಿಂಗಾಯತ ಸಂಘಟನೆ ಆಗ್ರಹಿಸಿದೆ. 

 

ಈ ಕೊಲೆಗಾರನಿಗೆ ಯಾವುದೇ ಕಾರಣಕ್ಕೂ ನ್ಯಾಯಾಲಯ ಜಾಮೀನು ನೀಡದೆ, ಗಲ್ಲುಶಿಕ್ಷೆ ಗೆ ಗುರುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತು ಈ ರೀತಿ ಕೃತ್ಯಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎನ್ಕೌಂಟರ್ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ಪೊಲೀಸ ಅಧಿಕಾರಿಗಳು ಕಾಲೇಜ್ ಗಳ ಸುತ್ತಮುತ್ತ ಇರುವ ಮಾದಕ ವಸ್ತುಗಳ ಪೂರೈಕೆ ಕೇಂದ್ರಗಳ ವಿರುದ್ಧ 

ಕೂಡಲೇ ನಿರ್ಧಾಕ್ಷಿಣವಾಗಿ ಕ್ರಮ ಕೈಗೊಳ್ಳಬೇಕು ಎಂದು ವೀರಶೈವ ಮುಖಂಡ ಹಾಗೂ ಧಾರವಾಡ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಬಂಗಾರೇಶ ಹಿರೇಮಠ ಆಗ್ರಹಿಸಿದ್ದಾರೆ.

ಇದೇ ವೇಳೆ ಈ ಘಟನೆ ಇಟ್ಟು ಕೊಂಡು ಸತ್ತ ಹೆಣದ ಮೇಲೆ ರಾಜಕೀಯ ಮಾಡುವ ಕೀಳು ಮಟ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಳಿಯಬಾರದು ಎಂದು ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟ ಎಚ್ಚರಿಸಿದೆ. 

ಬಂಗಾರೇಶ ಹಿರೇಮಠ ಜೊತೆಗೆ ರಾಜಶೇಖರ ಮೆಣಸಿನಕಾಯಿ , ಪ್ರಕಾಶಗೌಡ ಪಾಟೀಲ್ , ಸುರೇಶ ಸವಣೂರ , ವೀರಣ್ಣಾ ಹಿರೇಹಾಳ, ಮಂಜುನಾಥ ಲುತಿಮಠ , ಬಸವರಾಜ ಮೆಣಸಗಿ ,ರವಿ ಸಿದ್ಧಾಟಗಿಮಠ ,ಅಪ್ಪಣ್ಣ ಕಮ್ಮಾರ , ಎಂ ಪಿ ಶಿವಕುಮಾರ , ಮಹಾಂತೇಶ ಮಠದ ,ಹೇಮಲತಾ ಶಿವಮಠ , ಶರ್ಮಾ ಹಿರೇಮಠ , ಪ್ರಶಾಂತ ಮೇಲಿನಮನಿ ಮೃತಪಟ್ಟ ನೇಹಾಗೆ ಕಂಬನಿ ಮಿಡಿದಿದ್ದಾರೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಗದಗ ಜಿಲ್ಲೆಯ ನಾಲ್ಕು ಜನರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ನಡುಬೀದಿಯಲ್ಲಿಯೇ ಚಾಕು ಚೂರಿ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ.  ಮರ್ಯಾದಾ

Live Cricket

error: Content is protected !!