ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಆಡಿದ್ದ ಅದೊಂದು ಮಾತು ಮರಾಠಿಗರನ್ನು ರೊಚ್ಚಿಗೆಬ್ಬಿಸಿತ್ತು. “ಅವನ್ಯಾವನರಿ ನಾಲಾಯಕ ಸಂತೋಷ ” ಅಂದಿದೆ ತಡ, ಮರಾಠಾ ಸಮಾಜ ಕೊತ ಕೊತ ಉರಿಯುತ್ತಿದೆ. ಅಂದ ಹಾಗೇ ಇಂದು ಹುಬ್ಬಳಿಯಲ್ಲಿ ಬಿ ವೈ ವಿಜಯೇಂದ್ರ ವಿರುದ್ಧ ಹುಬ್ಬಳ್ಳಿಯಲ್ಲಿ ಮರಾಠಾ ಸಮುದಾಯ ಪ್ರತಿಭಟನೆ ನಡೆಸಿತು.
ಮರಾಠಾ ಸಮಾಜದ ಅಧ್ಯಕ್ಷ ಮೋಹನ ಮೋರೆ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯಿತು. ಬಿ ವೈ ವಿಜಯೇಂದ್ರ ವಿರುದ್ಧ ಮರಾಠಿಗರು ಸಿಟ್ಟಿಗೆದ್ದಿದ್ದರು. ಬಿ ವೈ ವಿಜಯೇಂದ್ರ, ನಾಲಾಯಕ ಅಂದಿದ್ದು ಕೇವಲ ಸಂತೋಷ ಲಾಡ ಅವರಿಗೆ ಅಷ್ಟೆ ಅಲ್ಲ, ಇಡೀ ಸಮಾಜಕ್ಕೆ ಅವರು ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಸಂತೋಷ ಲಾಡ್ ಅವರು ಪುರಸಭೆ ಸದಸ್ಯರಾಗಿ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ಸಂತೋಷ ಲಾಡ್ ಅವರು ಮರಾಠಾ ಸಮಾಜದ ಶಕ್ತಿ ಎಂದಿರುವ ಪಾಲಿಕೆ ಸದಸ್ಯ ಡಾ. ಮಯೂರ ಮೋರೆ, ಕೊಡಲೇ ಬಿ ವಿ ವಿಜಯೇಂದ್ರ, ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.