Download Our App

Follow us

Home » ಕಾನೂನು » ಎಫ್‌ಐಆರ್ ರದ್ದುಗೊಳಿಸಲು ಕುಟುಂಬಕ್ಕೆ 50 ಸಸಿಗಳನ್ನು ನೆಡುವಂತೆ ದೆಹಲಿ ಹೈಕೋರ್ಟ್ ಆದೇಶ.

ಎಫ್‌ಐಆರ್ ರದ್ದುಗೊಳಿಸಲು ಕುಟುಂಬಕ್ಕೆ 50 ಸಸಿಗಳನ್ನು ನೆಡುವಂತೆ ದೆಹಲಿ ಹೈಕೋರ್ಟ್ ಆದೇಶ.

ದೈಹಿಕ ಹಲ್ಲೆ ಮತ್ತು ಕಿರುಕುಳಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು 50 ಸಸಿಗಳನ್ನು ನೆಡುವಂತೆ ದೆಹಲಿ ಹೈಕೋರ್ಟ್ ಒಂದು ಕುಟುಂಬಕ್ಕೆ ಷರತ್ತಿನಂತೆ ನಿರ್ದೇಶನ ನೀಡಿದೆ.

ಸುಲ್ತಾನ್‌ಪುರಿಯಲ್ಲಿ ದೈಹಿಕ ಹಲ್ಲೆ ಮತ್ತು ಕಿರುಕುಳದ ಆರೋಪಗಳನ್ನು ಒಳಗೊಂಡಿರುವ ಎಫ್‌ಐಆರ್ ಅನ್ನು ವಿವಾದಿತ ಕಕ್ಷಿದಾರರ ನಡುವೆ ಸೌಹಾರ್ದಯುತವಾಗಿ ಪರಿಹರಿಸಲಾಗಿದೆ.

ಸುಲ್ತಾನಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನಿಷ್ಠ ಮೂರು ಅಡಿ ಎತ್ತರದ ಸಸಿಗಳನ್ನು ನೆಡಬೇಕು ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟಾ ಅವರು ಆದೇಶಿಸಿದರು.

ಎಂಟು ವಾರಗಳಲ್ಲಿ ಸ್ಥಳೀಯ ಪೋಲೀಸ್ ಅಥವಾ ಸ್ಟೇಷನ್ ಹೌಸ್ ಆಫೀಸರ್ ಮೇಲ್ವಿಚಾರಣೆ ಮಾಡಬೇಕಾದ ನೆಟ್ಟದ ಛಾಯಾಚಿತ್ರದ ಸಾಕ್ಷ್ಯವನ್ನು ಕುಟುಂಬವು ಒದಗಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ನೆರೆಹೊರೆಯವರಾಗಿರುವ ಅವರು, ವಿಚಾರಣೆಯನ್ನು ಸ್ತಬ್ಧಗೊಳಿಸಲು ಉದ್ದೇಶಿಸಿರುವುದನ್ನು ಗಮನಿಸಿದ ನಂತರ ನ್ಯಾಯಾಧೀಶರು ಈ ನಿರ್ಧಾರ ಪ್ರಕಟಿಸಿದ್ದಾರೆ. 

ಪ್ರಕರಣದ ಇತ್ಯರ್ಥವು ನೆರೆಹೊರೆಯವರ ನಡುವೆ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಅಲ್ಲದೆ, ಅವರ ನಡುವಿನ ಸೌಹಾರ್ದಯುತ ಇತ್ಯರ್ಥದ ದೃಷ್ಟಿಯಿಂದ ಅಪರಾಧ ನಿರ್ಣಯದ ಸಾಧ್ಯತೆಗಳು ಮಂಕಾಗಿವೆ ಎಂದು ನ್ಯಾಯಾಲಯ ತಿಳಿಸಿದೆ. 

ಎಫ್‌ಐಆರ್ ರದ್ದುಗೊಳಿಸುವುದಕ್ಕೆ ಪ್ರಾಸಿಕ್ಯೂಷನ್ ಯಾವುದೇ ಆಕ್ಷೇಪಣೆಯನ್ನು ತೆಗೆದುಕೊಳ್ಳಲಿಲ್ಲ.

ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಾಲಯ, ಸಸಿ/ಮರಗಳ ಪಾಲನೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಹೇಳಿದೆ.

“ಮರಗಳನ್ನು ನೆಡಲು ನಿರ್ದೇಶನಗಳನ್ನು ಅನುಸರಿಸದಿದ್ದಲ್ಲಿ, ಅರ್ಜಿದಾರರು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ 25,000/- ರೂ ವೆಚ್ಚವನ್ನು ಠೇವಣಿ ಮಾಡಲು ಜವಾಬ್ದಾರರಾಗಿರುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬೆಚ್ಚಿ ಬಿದ್ದ ಬಳ್ಳಾರಿ. ಜಿಲ್ಲಾ ಆಸ್ಪತ್ರೆ ವೈದ್ಯನ ಅಪಹರಣ

ಗಣಿ ನಾಡು ಬಳ್ಳಾರಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿನ ಮಕ್ಕಳ ವೈದ್ಯ ಡಾ.ಸುನೀಲ್ ರನ್ನು ಅಪಹರಣ ಮಾಡಲಾಗಿದೆ. ಬೆಳಿಗ್ಗೆ ವಾಯುವಿಹಾರಕ್ಕೆ ಹೋದಂತ ಸಂದರ್ಭದಲ್ಲಿ ಅಪಹರಣ ಮಾಡಲಾಗಿದೆ.  ಬೆಳಿಗ್ಗೆ ಸತ್ಯನಾರಾಯಣ ಪೇಟೆಯ

Live Cricket

error: Content is protected !!