ಸ್ವಯಂ ಘೋಷಿತ ದೇವ ಮಾನವ, ಅತ್ಯಾಚಾರದ ಆರೋಪದ ಮೇಲೆ ದೇಶ ತೊರೆದಿರುವ ನಿತ್ಯಾನಂದ ಸ್ವಾಮಿ ಇದೀಗ ಭಾರತೀಯ ಪ್ರಜೆಗಳನ್ನು ತನ್ನ ದೇಶಕ್ಕೆ ಆಹ್ವಾನಿಸಿದ್ದಾನೆ.
ತನ್ನದೇ ಆದ ಕೈಲಾಸ ದೇಶವನ್ನು ಸ್ಥಾಪಿಸಿಕೊಂಡಿರುವ ನಿತ್ಯಾನಂದ ಸ್ವಾಮಿ, ಕೈಲಾಸ ದೇಶಕ್ಕೆ ಉಚಿತ ಪೌರತ್ವ ನೀಡುವದಾಗಿ ಹೇಳಿದ್ದಾನೆ. ಕೈಲಾಸ ದೇಶದ ಪ್ರಜೆಗಳಾಗಲು ಬಯಸುವವರು ಕೂಡಲೇ ಸ್ಕ್ಯಾನ್ ಮಾಡುವ ಮೂಲಕ ಅರ್ಜಿಯನ್ನು ತುಂಬ ಬಹುದಾಗಿದೆ.
ಆದರೆ ಕೈಲಾಸ ದೇಶಕ್ಕೆ ಯಾವ ಮಾರ್ಗದಿಂದ ಬರಬೇಕು, ಮತ್ತು ಅದು ಎಲ್ಲಿದೆ ಅನ್ನೋದನ್ನ ಮಾತ್ರ ತಿಳಿಸಿಲ್ಲ. ಆ ದೇಶದ ವಿಳಾಸವೂ ಗೊತ್ತು ಮಾಡಿಕೊಟ್ಟಿಲ್ಲ.