ಚೈನಾ, ಭಾರತದ ಗಡಿಯಲ್ಲಿ ನುಸುಳಿದ್ದು, 4 ಸಾವಿರ ಚದುರ ಅಡಿಯಷ್ಟು ಜಾಗೆ ಅತಿಕ್ರಮಿಸಿಕೊಂಡಿದೆ ಎಂದು ಹೇಳಿರುವ ಸಂತೋಷ ಲಾಡ್ ರ ಹೇಳಿಕೆಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಸುವರ್ಣ ನ್ಯೂಸ್ ಸುದ್ದಿ ನಿರೂಪಕ ಅಜಿತ ಹನುಮಕ್ಕನವರಗೆ, ಸಂತೋಷ ಲಾಡ್ ನೀಡಿರುವ ಸಂದರ್ಶನದ ಒಂದು ಭಾಗವನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ನಾಯಕರಾಗಿರುವ ಸುಬ್ರಮಣಿಯನ್ ಸ್ವಾಮಿ, ದೇಶದ ಗಡಿಯನ್ನು ಆಕ್ರಮಿಸಿಕೊಂಡಿರುವ ಚೀನಾ ಬಗ್ಗೆ ಗಮನ ಸೆಳೆದು, ನರೇಂದ್ರ ಮೋದಿ ಸರ್ಕಾರದ ಮೇಲೆ ಮುಗಿಬಿದ್ದಿದ್ದರು. ಇದನ್ನು ಸಚಿವ ಸಂತೋಷ ಲಾಡ್, ಸಂದರ್ಶನದಲ್ಲಿ ಹೇಳಿದ್ದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದ ಸಚಿವ ಸಂತೋಷ ಲಾಡ್, ಸಾಮಾಜಿಕ ಜಾಲತಾಣಗಳಲ್ಲಿ ಮನೆ ಮಾತಾಗಿದ್ದರು.