ಕಳೆದ ತಿಂಗಳು 21 ರಂದು ರಾಜಸ್ಥಾನದ ಬನ್ಸಾರ್ ದಲ್ಲಿ, ದೇಶದ ಜನರ ಆಸ್ತಿ ಹಂಚಿಕೆ ಕುರಿತು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಕುರಿತು ಸಚಿವ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸ್ಲಿಮರಿಗೆ ನೀಡುತ್ತಾರೆ ಎಂದು ಹೇಳಿದ್ದ ಮೋದಿಯವರು ಇದೀಗ ಉಲ್ಟಾ ಹೊಡೆದಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಹಿಂದು ಮುಸ್ಲಿಮ್ ಅಂತ ರಾಜಕೀಯ ಮಾಡಿದ ದಿನ ಅಂದು ನಾನು ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ ಅಂತ ನರೇಂದ್ರ ಮೋದಿ ಈಗ ಹೇಳುತ್ತಿದ್ದಾರೆ. ಹಾಗಾದರೆ ಅಂದು ಹೇಳಿದ ಹೇಳಿಕೆ ಹಿಂದು ಮುಸ್ಲಿಮ್ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮೋದಿಯವರ ದ್ವಿಮುಖ ಹೇಳಿಕೆಗೆ ಗರಂ ಆಗಿರುವ ಸಚಿವ ದಿನೇಶ ಗುಂಡೂರಾವ್, ಮೋದಿಯವರಿಗೆ ಕಠಿಣ ಪ್ರಶ್ನೆಯೊಂದನ್ನು ಕೇಳಿದ್ದಾರೆ.
” ನೀವು ಹುಟ್ಟಿದ ಮೇಲೆ ಸುಳ್ಳು ಹುಟ್ಟಿದ್ದೋ? ಅಥವಾ ಸುಳ್ಳು ಹುಟ್ಟಿದ ಮೇಲೆ ನೀವು ಹುಟ್ಟಿದ್ದೋ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ